





ನೇತ್ರಾವತಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಹೊಳೆಗಂಡಿ ಸೇತುವೆ ಸಮೀಪ ಟೂರಿಸ್ಟ್ ಕಾರೊಂದು ಚರಂಡಿಗೆ ಬಿದ್ದಿರುವ ಘಟನೆ ಇವತ್ತು ಬೆಳಗ್ಗೆ ನಡೆದಿದೆ.



ಉಡುಪಿ ಮೂಲದವರಿಗೆ ಸೇರಿದ್ದು ಎನ್ನಲಾದ ಕಾರು ಉಜಿರೆ ಕಡೆಯಿಂದ ಧರ್ಮಸ್ಥಳಕ್ಜೆ ತೆರಳುವ ವೇಳೆ ಘಟನೆ ನಡೆದಿದೆ. ಮೇಲ್ನೋಟಕ್ಕೆ ಯಾವುದೇ ಗಂಭೀರಗಾಯಗಳೂ ಆಗಿಲ್ಲ,ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ಮಾಹಿತಿ ತಿಳಿದುಬಂದಿದೆ.








