ಮಸ್ಕತ್ ನಲ್ಲಿ ಬೆಳ್ತಂಗಡಿ‌ ಮೂಲದ ಯುವತಿ ಹೃದಯಾಘಾತದಿಂದ ಸಾವು

0

ಮಸ್ಕತ್: ಬೆಳ್ತಂಗಡಿ‌ ಮೂಲದ ಯುವತಿಯೋರ್ವರು ಮಸ್ಕತ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೇ.4ರಂದು ಸಂಭವಿಸಿದೆ. ಮೃತಪಟ್ಟ ಯುವತಿ ಬೆಳ್ತಂಗಡಿಯ ಕಕ್ಕಿಂಜೆ ನೆರಿಯ ಬಲಿಪಾಯಿ ನಿವಾಸಿ ಮೂಸೆಕುಂಞ ಅವರ ಪುತ್ರಿ ನುಸೈಬಾ(30) ನುಸೈಬಾ ಗೆ ಬಿಸಿರೋಡ್ ನಿವಾಸಿ ಶಕೀಬ್ ಜೊತೆ 6 ವರ್ಷಗಳ ಹಿಂದೆ ವಿವಾಹವಾಗಿತ್ತು.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಮೇ.4ರಂದು ಬೆಳಿಗ್ಗೆ ಮಸ್ಕತ್ ನಲ್ಲಿ ಕೋಣೆಯಲ್ಲಿ ಸುಮಾರು 5 ಗಂಟೆಗೆ ಎದ್ದು ನುಸೈಬ ಎಂದಿನಂತೆ ಪತಿಗೆ ಕೆಲಸಕ್ಕೆ ಕಳುಹಿಸಿದ್ದರು. ಬಳಿಕ 7 ಗಂಟೆಗೆ ಮೊದಲ ಶಿಪ್ಟ್ ಮುಗಿಸಿ ಪತಿ ರೂಂಗೆ ಬಂದು ನೋಡಿದಾಗ ಪತ್ನಿ ಪ್ರಜ್ಞೆ ಕಳೆದುಕೊಂಡಿದ್ದರು. ಬಳಿಕ ವೈದ್ಯರನ್ನು ಕರೆಸಿ ಪರಿಶೀಲಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ತಿಳಿದು‌ ಬಂದಿದೆ.

LEAVE A REPLY

Please enter your comment!
Please enter your name here