ಬೆಳಾಲು: ನಿಂತಿಕಲ್ಲು ಅಂಗನವಾಡಿಯ ಪುಟಾಣಿಗಳಿಗೆ ಬೀಳ್ಕೊಡುಗೆ ಸಮಾರಂಭ

0

ಬೆಳಾಲು: ಇಲ್ಲಿಯ ನಿಂತಿಕಲ್ಲು ಅಂಗನವಾಡಿಯಲ್ಲಿ ಎ.24 ರಂದು 13 ಮಕ್ಕಳಿಗೆ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಯಿತು.

ಬೀಳ್ಕೊಡುವ ಮಕ್ಕಳಿಗೆ ಶಾಲೆಯ ವತಿಯಿಂದ ಪುಸ್ತಕ, ಪೆನ್ಸಿಲ್ ನ್ನು ನೀಡಲಾಯಿತು.ಮಕ್ಕಳ ಪೋಷಕರು ಶಾಲೆಗೆ ಟೇಬಲ್ ನ್ನು ಕೊಡುಗೆಯಾಗಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಉಷಾ, ಆಶಾ ಕಾರ್ಯಕರ್ತೆ ಶ್ರೀಮತಿ ಶೀಲಾವತಿ, ಮಾಜಿ ಅಧ್ಯಕ್ಷೆ ಶ್ರೀಮತಿ ಭವಾನಿ, ಮಕ್ಕಳ ತಾಯಂದಿರು, ಹಳೆವಿದ್ಯಾರ್ಥಿಗಳು ಹಾಜರಾಗಿದ್ದರು.

ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿ ನಿರೂಪಿಸಿ, ಅಂಗನವಾಡಿ ಸಹಾಯಕಿ ಶ್ರೀಮತಿ ವಿಮಲ ಸಹಕರಿಸಿದರು.

p>

LEAVE A REPLY

Please enter your comment!
Please enter your name here