ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ಸಂಭ್ರಮ

0

ಬೆಳ್ತಂಗಡಿ: ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘವು ಪರಸ್ಪರ ಸಹಕಾರ’ ಎಂಬ ಪರಮ ಧ್ಯೇಯವನ್ನು ಮುಂದಿಟ್ಟುಕೊಂಡು 1998-ಜ.26ರಂದು ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಅತೀ ವಂದನೀಯ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜರವರಿಂದ ಆರ್ಶೀವಚನಗೊಂಡು, ಅಂದಿನ ಬೆಳ್ತಂಗಡಿಯ ವಿಧಾನಸಭಾ ಶಾಸಕರಾದ ವಸಂತ ಬಂಗೇರರಿಂದ ಉದ್ಘಾಟನೆಗೊಂಡಿತ್ತು, ಈ ಸಹಕಾರ ಸಂಘವು ಗ್ರಾಹಕರ ಸೇವೆಯನ್ನು ಮೂಲ ಉದ್ದೇಶವಾಗಿ ಮೈಗೂಡಿಸಿಕೊಂಡು, ಸಹಕಾರಿ ಸಂಸ್ಥೆಗಳ, ಸಹಕಾರ ಇಲಾಖೆಯ ಹಾಗೂ ಜನರ ಉತ್ತಮ ನಂಬಿಕೆ, ವಿಶ್ವಾಸ ಹಾಗೂ ಭಾಂದವ್ಯದ ಮೂಲಕ ಯಶಸ್ಸು ಸಾಧಿಸಿದೆ.

ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘವು ಆಡಳಿತ ಮಂಡಳಿಯ ಹಾಗೂ ಜನತೆಯ ಸಹಕಾರದಿಂದ ಸಹಕಾರ ಇಲಾಖೆಯ ಅನುಮತಿಯಿಂದ 2007 ರಲ್ಲಿ ನಾರಾವಿ ಹಾಗೂ 2012 ರಲ್ಲಿ ಅಳದಂಗಡಿಯಲ್ಲಿ ಹಾಗೂ 2021 ರಲ್ಲಿ ವೇಣೂರು ಶಾಖೆಗಳನ್ನು ಉದ್ಘಾಟನೆಗೊಂಡಿದೆ.ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ಅಭಿವೃದ್ಧಿಗೆ ಅನೇಕ ಮಹನಾಯಕರು ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿರುತ್ತಾರೆ.
ಸಂಘವು ಸ್ಥಾಪನೆಗೊಳ್ಳಲು ಮುಖ್ಯಪ್ರವರ್ತಕರಾಗಿ ಫ್ರಾಂಕಿ ಡಿಸೋಜ, ಸಂಚಾಲಕರಾಗಿ ರೊನಾಲ್ಡ್ ಸಲ್ದಾನ, ಜೆ ಪಿ ಸಲ್ದಾನ, ಎಲೋಸಿಯಸ್ ಎಸ್. ಲೋಬೊ, ಜೇಮ್ಸ್ ಡಿಸೋಜ, ಲ್ಯಾನ್ಸಿ ಎ ಪಿರೇರಾ, ಎಲೋಸಿಯನ್ ಡಿಸೋಜ, ಅಲ್ಫೋನ್ಸ್ ಮೊರಾಸ್, ದಿ. ರಮಿಜಿಯಸ್ ಲೋಬೊ, ಲಾರೆನ್ಸ್ ಡೆಸಾ, ದಿ.ಹಿಲರಿ ಮೆಂಡೊನ್ಸಾ, ದಿ. ಐ.ಎಲ್,ಪಿಂಟೊ, ಸಿರಿಲ್, ಪ್ಯಾಸ್, ಹೆನ್ರಿ ಡಿಸೋಜ, ಶ್ರೀಮತಿ ರೀಟಾ ಪಿಂಟೊ ಇವರು ಕಾರಣಾಕರ್ತರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ಸಾಧಿಸುತ್ತಾ ಬಂದು ಪ್ರಾರಂಭದಲ್ಲಿ604 ಜನ ಸದಸ್ಯರಿದ್ದು ಸಂಘವು ಇಂದು “ಎ” ತರಗತಿ 2525ರಿದ್ದು 6ಲಕ್ಷ ಪಾಲು ಬಂಡವಾಳದೊಂದಿಗೆ ಆರ೦ಭವಾಗಿ ಇಂದು ರೂ. 83 ಲಕ್ಷದ 25 ಸಾವಿರ ಪಾಲು ಬಂಡವಾಳವನ್ನು ಹೊಂದಿರುವುದು ಉತ್ತಮ ಸಾಧನೆಗೆ ನೈಜ ಸಾಕ್ಷಿ.ಅನೇಕ ವರ್ಷದಿಂದ ಜನಪರ ಕೆಲಸಗಳನ್ನು ಕೈಗೊಂಡಿರುತ್ತದೆ ಹಾಗೂ ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ಬಡವರಿಗೆ ಧನ ಸಹಾಯ, ಧಾರ್ಮಿಕ ಕೆಲಸಗಳಿಗೆ ಸಹಾಯ ಮಾಡುತ್ತಿರುವ ಸಂಘವು ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ಸೌಲಭ್ಯವನ್ನು ಹೊಂದಿರುತ್ತದೆ. ಸಂಘವು ಗ್ರಾಹಕರ ಅನುಕೂಲಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪ್ರಸ್ತುತ ರೂ. 61 ಕೋಟೀ 59 ಲಕ್ಷ ಸಾಲ ಹೊರ ಬಾಕಿ ಇರುತ್ತದೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದ್ದು ರೂ. 77.09 ಕೋಟಿ ಠೇವಣಿ ಹೊಂದಿದ್ದು, ವಾರ್ಷಿಕ ವ್ಯವಹಾರವು 220 ಕೋಟಿಗೂ ಅಧಿಕವಾಗಿರುತ್ತದೆ.ಪ್ರಸ್ತುತ ಆಡಳಿತ ಮಂಡಳಿಯಲ್ಲಿ 14 ಮಂದಿ ನಿರ್ದೇಶಕರನ್ನು ಒಳಗೊಂಡಿದ್ದು, ಪದನಿಮಿತ್ತ ಆಡಳಿತ ಮಂಡಳಿಯ ಸದಸ್ಯರಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸ್ತುತ ಅಧ್ಯಕ್ಷರಾಗಿ ಹೆನ್ರಿ ಲೋಬೋ, ಉಪಾಧ್ಯಕ್ಷರಾಗಿ ಡೇನಿಸ್ ಸಿಕ್ವೇರಾರವರು ಹಾಗೂ ನಿರ್ದೇಶಕರುಗಳಾಗಿ ಜೇಮ್ಸ್ ಡಿಸೋಜ, ಜೋಸೆಫ್ ಪೀಟರ್ ಸಲ್ದಾನ, ಹೆರಾಲ್ಡ್ ಪಿಂಟೊ, ಅಲ್ಫೋನ್ಸ್ ರೊಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ತೋಮಸ್ ಆರ್ ನೊರೊನ್ಹಾ, ಪ್ರಸಾದ್ ಪಿಂಟೋ, ರಫಾಯಲ್ ಶ್ರೀಮತಿ ಪೌಲಿನ್ ರೇಗೊ, ಶ್ರೀಮತಿ ಪ್ಲಾವಿಯ ಹಾಗೂ ವೃತ್ತಿಪರ ನಿರ್ದೇಶಕರುಗಳಾಗಿ ವಿನಯ್‌ ಜಾನ್ಸನ್ ಡಿಸೋಜ ಹಾಗೂ ರಿಯೋ ಎಂ. ರೊಡ್ರಿಗಸ್ ರವರು ಕಾಲಕಾಲಕ್ಕೆ ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿ ಉನ್ನತೋನ್ನತ ಪ್ರಗತಿಗೆ ಸಹಕರಿಸಿದ್ದಾರೆ.ಸಹಕಾರ ಸಂಘದಲ್ಲಿ ಒಟ್ಟು 15 ಮಂದಿ ಸಿಬ್ಬಂದಿಗಳಿದ್ದು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದು ಹಾಗೂ ಗ್ರಾಹಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಸಂಘದಲ್ಲಿ 07 ಮಂದಿ ಪಿಗ್ಮಿ ಸಂಗ್ರಾಹಕರಿದ್ದು ಸಂಘದ ಏಳಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ.ಗ್ರಾಹಕರು, ಎಲ್ಲಾ ಸದಸ್ಯರು ಉತ್ತಮ ರೀತಿಯಲ್ಲಿ ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದ್ದಾರೆ.

ಎ.15ರಂದು ಬೆಳ್ಳಿ ಹಬ್ಬದ ಸಂಭ್ರಮ ಆಚರಣೆಯು ಸಿವಿಸಿ ಸಭಾಂಗಣದಲ್ಲಿ ನಡೆಯಿತು.ಬೆಳ್ತಂಗಡಿ ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವ. ಫಾ.ಕ್ಲಿಫರ್ಡ್ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿದರು.ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿದರು.ಮುಖ್ಯ ಅಥಿತಿಗಳಾಗಿ ಬ್ರಹ್ಮಾವರ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ಮೀನೆಜಸ್, ಕಾನೂನು ಸಲಹೆಗಾರರು ಕೃಷ್ಣ ಶೆನೈ.ಕೆ, ಸ್ಥಾಪಕ ಮುಖ್ಯ ಪ್ರವರ್ತಕ ಪ್ರಾಂಕಿ ಡಿಸೋಜಾ, ಸ್ಥಾಪಕ ಸಂಚಾಲಕ ಪೀಟರ್ ಕ್ಯಾಲಿಸ್ಟ್ ಡಿಸೋಜಾ, ಸಹಕಾರೀ ಅಭಿವೃದ್ಧಿ ಅಧಿಕಾರಿ ಶ್ರಿಮತಿ ಪ್ರತಿಮಾ ಬಿ.ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here