ನೆರಿಯ :ಇಲ್ಲಿನ ಸಂತ ತೋಮಸರ ದೇವಾಲಯದಲ್ಲಿ ಪ್ರಭು ಯೇಸು ಕ್ರಿಸ್ತರ ಶಿಲುಬೆಯ ಮರಣದ ಆಚರಣೆಯಾದ ಶುಭ ಶುಕ್ರವಾರದ ಆಚರಣೆಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ದೆ ಯಿಂದ ಆಚರಿಸಲಾಯಿತು.
ಶುಭ ಶುಕ್ರವಾರದ ವಿಶೇಷ ಆಕರ್ಷಣೆ ಯಾಗಿ ಸುಮಾರು ಎರಡು ವರೆ ಕಿಲೋಮೀಟರ್ ದೂರವನ್ನು ಮದ್ಯಾಹ್ನದ ಉರಿ ಬಿಸಿಲಿನಲ್ಲಿ ಸಾಗಿ, ಯೇಸು ಕ್ರಿಸ್ತರ ಯಾತನೆ ಮತ್ತು ಮರಣದ ಸಂಕೇತವಾಗಿ ಶಿಲುಬೆಯ ಹಾದಿಯಲ್ಲಿ ನಡೆದು ತಮ್ಮ ಪಾಪಗಳಿಗೆ ಪರಿಹಾರ ಮತ್ತು ವರ್ಷದ ದಿನಗಳು ಐಶ್ವರ್ಯ ದಾಯಕವಾಗಲು ಬೇಡಿಕೊಂಡರು.
ಶಿಲುಬೆಯ ಹಾದಿಗೆ ವಂದನೀಯ ಫಾಧರ್ ಶಾಜಿ ಮಾತ್ಯು ನೇತೃತ್ವ ವಹಿಸದರು. ವಂದನಿಯ ಫಾಧರ್ ಬಿನು ಸಿ ಎಂ ಐ ಸಂದೇಶ ನೀಡಿದರು. ಅಕಂಪಡಿ ವ್ರತ್ತ ದಲ್ಲಿ ಸಂಪ್ರದಾಯದಂತೆ ದೇವಗಿರಿ ಚರ್ಚ್ನ ಶಿಲುಬೆಯ ಹಾದಿಯು ಜೊತೆ ಸೇರಲಾಯಿತು.
p>