



ಮುಂಡಾಜೆ ಗ್ರಾಮದ ನ್ಯೆಯ್ಯುಲು ನಿವಾಸಿ ಸದಾಶಿವ ನೇಕಾರ (72 ವ) ಅಲ್ಪಕಾಲದ ಅಸೌಖ್ಯದಿಂದ ಎ.7ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಉತ್ತಮ ಕೃಷಿಕರಾಗಿ ಅಪಾರ ತಿಳುವಳಿಕೆ ಹೊಂದಿದ್ದರು.


ಇವರು ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ವಸಂತಿ, ಪುತ್ರ ಮುಂಡಾಜೆ ಗ್ರಾಮ ಪಂಚಾಯತ್ ಸದಸ್ಯ ರವಿಚಂದ್ರ ನೇಕಾರ, ಪುತ್ರಿ ವೀಣಾ, ಮೊಮ್ಮಕ್ಕಳು, ಸಹೋದರಿಯರು, ಕುಟುಂಬಸ್ಥರು, ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.








