ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರೋತ್ಸವ ಸಂಪನ್ನ

0

ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಮಾ. 28 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಯುಗಾದಿಯ ಶುಭ ದಿನದಂದು ಕ್ಷೇತ್ರದ ತಂತ್ರಿಗಳಾದ ಬಾಲಕೃಷ್ಣ ಪಾಂಗಣ್ಣಾಯರ ನೇತೃತ್ವದಲ್ಲಿ ದ್ವಜಾರೋಹಣಗೊಂಡು ಏಳು ದಿನಗಳ ಪರ್ಯಂತ ದೇವರ ಉತ್ಸವ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಹಾಗೂ ಬಳಂಜ ಜೋಗಿ ಪುರುಷರ ವತಿಯಿಂದ ಶ್ರೀ ಗಣಪತಿ ದೇವರಿಗೆ ಪ್ರಭಾವಳಿಯನ್ನು ಹಾಗೂ ದಾನಿಗಳು ಹಾಗೂ ಪ್ರಗತಿಪರ ಕೃಷಿಕರಾದ ವಿಶ್ವನಾಥ ಹೊಳ್ಳ ಇವರಿಂದ ದೇವರ ಕೊಡಿಮರಕ್ಕೆ ಬೆಳ್ಳಿಯ ನಂದಿಯನ್ನು ಸಮರ್ಪಿಸಿದರು.
ಜಾತ್ರೋತ್ಸವದ ದಿನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳಿಂದ ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ತರಬೇತಿ ನೀಡುವ ಪ್ರಭಾಕರ್ ಶೆಟ್ಟಿ ಹಾಗೂ ಸಂಯೋಜನೆ ಮಾಡಿ ಪ್ರೋತ್ಸಾಹ ನೀಡುತ್ತಿರುವ ಜಾನಪದ ಕಲಾವಿದರಾದ ಸತೀಶ್.ಬಿ.ಇವರನ್ನು ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳ ಪೋಷಕರು ಸನ್ಮಾನ ಮಾಡಿದರು. ಯಕ್ಷಗಾನ ಪ್ರಾಯೋಜಕರಾದ ಉದ್ಯಮಿಗಳು ಕೊಡುಗೈ ದಾನಿಗಳು ಆಗಿರುವ ಹರೀಶ್ ಶೆಟ್ಟಿ ನಾಲ್ಕೂರು ಇವರನ್ನು ಸನ್ಮಾನಿಸಲಾಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶೀತಲ್ ಪಡಿವಾಳ್, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಬಾರ್ಧಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ್ ಪೂಜಾರಿ ಜೈಮಾತ ಸಹಕರಿಸಿದರು. ಕಾರ್ಯಕ್ರಮದ ಬಳಿಕ ದೇವರ ಬಲಿ ಉತ್ಸವ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ದೇವರ ಸುತ್ತು ಭಜನೆ, ಕೊಡಮಣಿತ್ತಾಯ ದೈವದ ನೇಮ, ರಥರೋಹಣ ನಡೆಯಿತು. ಚಾ ಪರ್ಕ ಕಲಾವಿದರಿಂದ ನಾಟಕ ನಡೆಯಿತು.

p>

LEAVE A REPLY

Please enter your comment!
Please enter your name here