ಪೋಕ್ಸೋ ಪ್ರಕರಣದ ಆರೋಪಿ ಕುಕ್ಕೇಡಿಯ ಆಸಿಮ್ ಪತ್ತೆಗೆ ಪೋಲಿಸರ ಮನವಿ

0

ಬೆಳ್ತಂಗಡಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಕುಕ್ಕೇಡಿ ಗ್ರಾಮದ ಉಳ್ತೂರು ಮನೆ ನಿವಾಸಿ ಮಹಮ್ಮದ್ ಅವರ ಪುತ್ರ ಆಸಿಮ್ (೨೯) ಪತ್ತೆಗಾಗಿ ಪೊಲೀಸ್ ಇಲಾಖೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
೨೦೧೫ರಲ್ಲಿ ನಡೆದ ಪೋಕ್ಸೊ ಪ್ರಕರಣದಲ್ಲಿ ಈತ ಮಂಗಳೂರು ಜಿಲ್ಲಾ ಜ್ಯೆಲಿನಲ್ಲಿದ್ದು ಇದೇ ವೇಳೆ ಜ್ಯೆಲಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಅಲ್ಲಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ದ ಮಂಗಳೂರು ಪೋಕ್ಸೋ ನ್ಯಾಯಾಲಯ ಪತ್ತೆಯ ಬಗ್ಗೆ ಉದ್ಘೋಷಣೆ ಹೊರಡಿಸಿದೆ. ಆರೋಪಿತ ಆಸಿಮ್‌ನ ಕುರಿತು ಸುಳಿವು ಸಿಕ್ಕಲ್ಲಿ ವೇಣೂರು ಪೊಲೀಸ್ ಠಾಣೆ ಉಪನಿರೀಕ್ಷಕರ ದೂರವಾಣಿ 9480805372 ಅಥವಾ ಠಾಣೆ ಸಂಖ್ಯೆ 08256-286232 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here