


ಪದ್ಮುಂಜ ಇಲ್ಲಿಯ ಸಿ ಎ ಬ್ಯಾಂಕ್ ಸಮೀಪವಿರುವ ಫಸಲು ಬರುತ್ತಿರುವ ಗೇರು ತೋಟಕ್ಕೆ ಮಾ.27 ರಂದು ಆಕಸ್ಮಿಕವಾಗಿ ಬೆಂಕಿ ಬಿದ್ದು ನೂರಾರು ಫಸಲು ಬರುತ್ತಿರುವ ಗೇರು ಮರಗಳು ಸುಟ್ಟು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ತಿಳಿದುಬಂದಿದೆ.

ವಿಷಯ ತಿಳಿದ ವನ ಪಾಲಕ,(.ವಾಚರ್ )ಸುಂದರ ಶೆಟ್ಟಿ ಹಾಗೂ ಊರ ನಾಗರಿಕರು ಬೆಂಕಿ ನಂದಿಸಲು ಶ್ರಮಿಸಿದ್ದು ಕೊನೆಗೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಲಾಗಿದೆ.
