ನಾರಾವಿ: ಕುತ್ಲೂರು-ನಾರಾವಿ ಗ್ರಾಮದ ವಿಕಾಸ ಹಬ್ಬವನ್ನು ಬಿಜೆಪಿ ಬಹಳ ಅದ್ಧೂರಿಯಾಗಿ ನಡೆದಿದೆ. ಕುತ್ಲೂರು-ನಾರಾವಿಗೆ ಬಿಜೆಪಿ ಏನು ಮಾಡಿದೆ ಅಂತ ತಿಳಿಸುವುದಕ್ಕಾಗಿ, ಕಾರ್ಯಕರ್ತರು ಹೆಮ್ಮೆಯಿಂದ ಈ ಚುನಾವಣೆಯಿಂದ ಕೆಲಸ ಮಾಡುವಂತಾಗಬೇಕ ಅನ್ನುವ ಉದ್ದೇಶದಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜರವರನ್ನು ಸ್ಮನಾನಿಸಲಾಯಿತು.
ಭವ್ಯ ಮೆರವಣಿಗೆ ನಂತರ ಕಾರ್ಯಕರ್ತರ ಸಭೆ
ವಿಕಾಸ ಹಬ್ಬಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜರನ್ನು ತೆರೆದ ವಾಹನದಲ್ಲಿ ವಿಶೇಷ ಮೆರವಣಿಗೆ ನಡೆಸಲಾಯಿತು. ಈ ವೇಳೆ ಬಿಜೆಪಿ ಶಾಸಕರ ಪರ ಜಯಘೋಷ ಮಾಡಲಾಯಿತು. ಬಿಜೆಪಿ ಸರ್ಕಾರದಲ್ಲಿ ಮಾಡಲಾಗಿರುವ ಕಾಮಗಾರಿಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಲಾಯಿತು.
ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರ ಆಡಳಿತ ವೈಖರಿ ಮತ್ತು ಶಾಸಕ ಹರೀಶ್ ಪೂಂಜರವರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಕಾಂಗ್ರೇಸ್ ನಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಯುವ ನಾಯಕ ಅಜಯ್ ಜಾಕೋಬ್ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು. ಅವರಿಗೆ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪಕ್ಷದ ಧ್ವಜ ನೀಡಿ ಬಿಜೆಪಿಗೆ ಸೇರ್ಪಡೆಗೊಳಿಸಿದರು.
ಇದೇ ವೇಳೆ ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ನಿರಂಜನ ಅಜ್ರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ್ ಕುಮಾರ್ ಹೆಗ್ಡೆ, ಶಕ್ತಿಕೇಂದ್ರದ ಅಧ್ಯಕ್ಷ ಮೋಹನ್ ಕುಮಾರ್ ಅಂಡಿಂಜೆ, ವಸಂತ ಭಟ್, ಶ್ರೀನಿವಾಸ್ ಕಿಣಿ, ಸತೀಶ್ ಪಡಿವಾಳ್, ಶೇಖರ್ ಹೆಗ್ಡೆ, ತುಂಗಪ್ಪ ಪೂಜಾರಿ,ಮರೋಡಿ ಗ್ರಾಮ ಪಂಚಾಯತ್ ನ ಪದ್ಮಶ್ರೀ,ಸದಾನಂದ ಉಂಗಿಲಬೈಲ್,ಡಾ.ಪ್ರಸಾದ್, ಸುಧೀರ್ ಸುವರ್ಣ,ರಾಜೇಶ್ ಮೂಡುಕೋಡಿ,ಸನತ್ ಕುಮಾರ್ ಹೆಗ್ಡೆ,ಅರುಣ್ ಕ್ರಾಸ್ತಾ,ಸುರೇಶ್ ಶೆಟ್ಟಿ,ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಚೆಲುವಯ್ಯ ಪೂಜಾರಿ, ಡಾಕಯ್ಯ ಪೂಜಾರಿ, ನಾರಾಯಣ ಪೂಜಾರಿ, ವಿಜಯ್ ಕುಮಾರ್ ಜಾನಡೆ,ಉಷಾಲತಾ ಮಹಾಬಲಪೂಜಾರಿ, ತಾರಾನಾಥ್ ಆಚಾರ್ಯ,ಸದಾನಂದ ಬಂಗೇರ ಮಲೆಬೆಟ್ಟು, ವಿಶ್ವನಾಥ್ ಪೂಜಾರಿ ಗಾಂದೋಟ್ಟು,ಸುನಿಲ್ ಹಿಂದೋಟ್ಟು, ವಸಂತ್ ನಾರಾವಿ,ರಂಜು ಕುತ್ಲೂರು, ರಂಜಿತ್ ಹೊಸಹೊಕ್ಲು, ಮುಂತಾದ ಗಣ್ಯರು ಉಪಸ್ಥಿತರಿದ್ದರು. ನಾರಾವಿ ಕೃಷಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಭಂಡಾರಿ ಸ್ವಾಗತಿಸಿದರು.