


ಕುವೆಟ್ಟು: ಮದ್ದಡ್ಕ ಸಮೀಪದ ಪಲ್ಕೆ ಎಂಬಲ್ಲಿ ವರ್ಷಂಪ್ರತಿ ಜರಗುವ ಮಾರಿ ಪೂಜೆ ಹಾಗೂ ಗುಳಿಗ ದೈವದ ಗಗ್ಗರ ಸೇವೆ ಮಾ.24 ರಂದು ಜರಗಿತು.

ಹಿರಿಯರಾದ ಓಬಯ್ಯ ಪೂಜಾರಿ ಸುದೆಬೈಲು, ನೋಣಯ್ಯ ಪೂಜಾರಿ ಪಲ್ಕೆ ಸೇವೆಯನ್ನು ನಡೆಸಿದರು. ಬಾಬು ಶೆಟ್ಟಿ ಪಡ್ಡೈಲು, ಶಾಂತರಾಮ ಶೆಟ್ಟಿ, ಮೋನಪ್ಪ ಕೆ ಪಲ್ಕೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಚಿದಾನಂದ ಕಾಯೆರಡ್ಕ, ಶೀನ ಶೆಟ್ಟಿ ಪಲ್ಕೆ, ಗಣೇಶ್ ಶೆಟ್ಟಿ ಅರ್ಕಜೆ, ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಶಿವಪ್ಪ ನಾಯ್ಕ್ ಭದ್ರಕಜೆ, ಪ್ರದೀಪ್ ನಾಯಕ್ ಬಲ್ಕತ್ಯಾರು, ರುದೇಶ್ ಕುಮಾರ್ ಗಾಣದಕೋಟ್ಯ, ಲಕ್ಷ್ಮಿಕಾಂತ್ ಮೂಡೈಲು, ಕೃಷ್ಣ ಶೆಟ್ಟಿ ಮದ್ದಡ್ಕ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.