ಮುಂಡಾಜೆ ಕಾಜೂರು ತಂಙಳ್‌ರ 35 ನೇ ವರ್ಷದ ಸ್ಮರಣೆಯ ಅಂಗವಾಗಿ ಸರ್ವ ಧರ್ಮೀಯರ ಜೊತೆ ‘ಪ್ರೀತಿ ಹಂಚೋಣ ಬನ್ನಿ’ ಕಾರ್ಯಕ್ರಮ

0

ಮುಂಡಾಜೆ: ಕಾಜೂರು ತಂಙಳ್ ಎಂದೇ ಪ್ರಸಿದ್ಧಿ ಪಡೆದಿದ್ದ ಮರ್‌ಹೂಮ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಅವರ 35 ನೇ ವರ್ಷದ ಸ್ಮರಣೆಯ ಅಂಗವಾಗಿ ಮಾ.20 ರಂದು ಮುಂಡಾಜೆಯ ಅವರ ನಿವಾಸದಲ್ಲಿ ಸರ್ವಧರ್ಮೀಯರ ಸೇರುವಿಕೆಯೊಂದಿಗೆ ‘ಪ್ರೀತಿ ಹಂಚೋಣ ಬನ್ನಿ’ ವಿಶಿಷ್ಟ ಕಾರ್ಯಕ್ರಮ ಜರುಗಿತು.
ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಸೌಹಾರ್ದ ವೇದಿಕೆಯ ಉಪಾಧ್ಯಕ್ಷರೂ ಹಾಗೂ ಗಾಂಧಿ ವಿಚಾರ ವೇದಿಕೆಯ ಕೇಂದ್ರೀಯ ಸಮಿತಿ ಅಧ್ಯಕ್ಷ ಶ್ರೀಧರ ಜಿ‌ ಭಿಡೆ, ನಿವೃತ್ತ ಎಸಿಎಫ್ ಎಂ.ಎಸ್ ವರ್ಮ, ಅನಂತ ಫಡ್ಕೆ ಟ್ರಸ್ಟ್ ಸಂಚಾಲಕ ಪ್ರಹ್ಲಾದ ಫಡ್ಕೆ, ರಬ್ಬರ್ ಸೊಸೈಟಿ‌ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ನ್ಯಾಯವಾದಿ ಸುದರ್ಶನ ರಾವ್ ಗಜಂತೋಡಿ, ಡಾ.ರವೀಂದ್ರನಾಥ ಪ್ರಭು,
ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಬಿಜೆಪಿ ಗ್ರಾ.ಸಮಿತಿ ಅಧ್ಯಕ್ಷ ಗಣೇಶ್ ಬಂಗೇರ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪೂವಪ್ಪ ನಾಯ್ಕ, ಗೌಡರ ಯಾನೆ ಒಕ್ಕಲಿಗರ ಸಂಘದ ತಾ. ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಸ್ಥಾಪಕ ನಾಮದೇವ ರಾವ್, ಶ್ರೀ ರಾಮಾಂಜನೇಯ ಕ್ಷೇತ್ರದ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಕುರುಡ್ಯ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ‌ ಅರ್ಚಕ ಸತ್ಯನಾರಾಯಣ ಹೊಳ್ಳ ಕಾಣರ್ಪ, ಸೈಂಟ್ ಮೇರಿ ಚರ್ಚ್‌ನ ಪಾಲನಾ ಮಂಡಳಿಯ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಅರಸಮಜಲು, ರವಿ ಶೆಟ್ಟಿ ನೆಯ್ಯಾಲು , ರೋಷನ್ ಅರಸಮಜಲು, ರಮೇಶ್ ಆಚಾರ್ಯ ಇವರು ಭಾಗಿಯಾಗಿದ್ದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಕಾಜೂರು ತಂಙಳ್; ಕೇರಳದ ಮಲಪ್ಪುರಂ ಜಿಲ್ಲೆಯವರಾಗಿದ್ದ ಕಾಜೂರು ತಂಙಳ್ ಅವರು ಕಾಜೂರಿನಲ್ಲಿ ಸುದೀರ್ಘ 18 ವರ್ಷಗಳ ಕಾಲ ಧಾರ್ಮಿಕ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದರು. ಅವರ ಪುತ್ರ ಈಗಿನ ಕಾಜೂರು ತಂಙಳ್ ಅವರು ಶೈಖುನಾ ಉಳ್ಳಾಲ‌ ತಂಙಳ್ ನಿರ್ದೇಶನದಂತೆ ಕಳೆದ 24 ವರ್ಷಗಳಿಂದ ಕಾಜೂರಿನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

p>

LEAVE A REPLY

Please enter your comment!
Please enter your name here