


ಬೆಳ್ತಂಗಡಿ: ಕರ್ನಾಟಕ ಸರಕಾರದ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿದ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಪ್ರತೀಕ್ ವಿ. ಎಸ್. ಇವರು ಡಿಸ್ಟಿಂಕ್ಷನ್ ಗಳಿಸಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಇವರು ಬೆಳ್ತಂಗಡಿಯ ಹಿರಿಯ ಸಂಗೀತ ಶಿಕ್ಷಕಿ ವಿಧುಷಿ ಕವಿತಾ ಕೊರ್ನಯ ಇವರ ಶಿಷ್ಯರಾಗಿದ್ದು, ಬೆಳ್ತಂಗಡಿಯ ಉದ್ಯಮಿ ವಸಂತ ಶೆಟ್ಟಿ ಶ್ರದ್ದಾ ಮತ್ತು ಶಾಲಿನಿ ದಂಪತಿಯ ಪುತ್ರ ಹಾಗೂ ಬೆಳ್ತಂಗಡಿಯ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ.