ಗುರುವಾಯನಕೆರೆ: ರೂ.1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವು ಪರಮಪೂಜ್ಯ ಕರ್ಮಯೋಗಿ ಯೋಗಿಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಸಮಾಜದ ಹಿರಿಯರ ಸಮ್ಮುಖದಲ್ಲಿ ಮಾ.19ರಂದು ಗುರುವಾಯನಕೆರೆಯಲ್ಲಿ ಜರುಗಿತು.
ಸದೃಢವಾಗಿರುವ ದೇಶದಲ್ಲಿ ಹಿಂದೂ ಸಾಮ್ರಾಜ್ಯ ಹಿಂದುತ್ವದ ಆಚಾರ-ವಿಚಾರದ ಸದ್ದೋದನೆಯ ತತ್ಸಂಗಗಳು ಮನಮುಟ್ಟುವಲ್ಲಿ ಮಕ್ಕಳಿಗೆ ಪ್ರವೃತ್ತಿಸುವಂತಾಗಲಿ, ಸದೃಢವಾಗಿರುವ ಇಡೀ ಹಿಂದೂ ಸಮಾಜದ ಬಂಧುಗಳ ಮನಸ್ಸನ್ನು ಮುಟ್ಟುವ ಕಾರ್ಯವನ್ನು ಶಾಸಕ ಹರೀಶ್ ಪೂಂಜರು ಮಾಡುತ್ತಿದ್ದಾರೆ, ಅವರು ಹಿಂದೂ ಸಮಾಜದ ಶಕ್ತಿ ಎಂದು ಮಾಣಿಲ ಶ್ರೀಧಾಮದ ಕರ್ಮಯೋಗಿ ಯೋಗಿಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದು ಆಶೀರ್ವಚನ ನೀಡಿದರು.
ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಕುಲಾಲ ಕುಂಬಾರ ಸಮುದಾಯ ನನ್ನ ಪ್ರೀತಿಯ ಸಹೋದರತೆ ಭಾವನೆಯ ಸಮುದಾಯ. ಅಂದು ನಡೆದ ಹಕ್ಕೋತ್ತಾಯದಲ್ಲಿ ಸಮುದಾಯ ಭವನಕ್ಕೆ ರೂ. 50 ಲಕ್ಷ ತೆಗೆಸಿಕೊಡುವುದಕ್ಕೆ ಶ್ರಮವಹಿಸುತ್ತೇನೆ ಎಂದಿದ್ದೆ. ಬಳಿಕ ಶಾಸಕನಾಗುವ ಯೋಗ ಬಂದಿದ್ದು, ಈಗಾಗಲೇ ರೂ. 1.80 ಕೋಟಿ ಅನುದಾನ ಒದಗಿಸಿದ್ದೇನೆ. ಮುಂದಿನ ಅವಧಿಯಲ್ಲಿ ಅನುದಾನವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಭರವಸೆ ನೀಡುತ್ತೇನೆ.
ಬೆಳ್ತಂಗಡಿ ತಾ. ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೇವಾ ಸಂಘದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸೋಮಯ ಮೂಲ್ಯ ಹನೈನೆಡೆ, ರಾಜ್ಯ ಕುಂಬಾರರ ಮಹಾ ಸಂಘದ ಕಾರ್ಯಾಧ್ಯಕ್ಷ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಆಶಾಲತಾ, ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷ ಮಯೂರ್ ಉಳ್ಳಾಲ್, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ವಿಠಲ್ ಕನೀರ್ ತೋಟ, ಉದ್ಯಮಿ ರವಿ ಕುಲಾಲ್, ಕಾಯರ್ತಡ್ಕ ಕುಂಬಾರರ ಸೇವಾ ಗೌರವ ಅಧ್ಯಕ್ಷ ಸಂಜೀವ ಕುಂಬಾರ, ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಬಂದಾರು ಸಂಘದ ಶೀನಪ್ಪ ಕುಂಬಾರ, ಬೆಳ್ತಂಗಡಿ ತಾ.ಯುವ ವೇದಿಕೆ ಅಧ್ಯಕ್ಷ ಉಮೇಶ್ ಕುಲಾಲ್, ತಾಲೂಕು ಮಾಜಿ ಅಧ್ಯಕ್ಷ ಗೋವಿಂದ ಮೂಲ್ಯ ಕಟ್ಟಡ ಸಮಿತಿ ಕಾರ್ಯದರ್ಶಿ ಜಗನ್ನಾಥ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.