ಕೊಲ್ಲಿ: 25ನೇ ವರ್ಷದ ಬಂಗಾಡಿ ಕೊಲ್ಲಿ ಸೂರ್ಯ ಚಂದ್ರ ಜೋಡುಕರೆ ಕಂಬಳ ನೇತ್ರಾವತಿ ನದಿ ಕಿನಾರೆಯ ವಿಶಾಲ ಕಂಬಳ ಕರೆಯಲ್ಲಿ ಆರಂಭಗೊಂಡಿದೆ. ರಂಜನ್ ಜಿ ಗೌಡ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ 25ನೇ ವರ್ಷದ ಸೂರ್ಯ ಚಂದ್ರ ಜೋಡುಕರೆ ಕಂಬಳವನ್ನು ಧಾರ್ಮಿಕ ಧತ್ತಿ ಇಲಾಖೆಯ ಮಾಜಿ ಸದಸ್ಯರಾದ ಮುಕುಂದ ಸುವರ್ಣ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.
ಕಂಬಳವನ್ನು ಉದ್ಘಾಟಿಸಿ ಮಾತನಾಡಿದ ಮುಕುಂದ ಸುವರ್ಣರವರು, ಕುದುರೆ ಮುಖದ ತಪ್ಪಲಿನಲ್ಲಿ ಈ ಹಳ್ಳಿಯಲ್ಲಿ ಕಂಬಳ ನಡೆಸಲು ಖರ್ಚು ಬಹಳಷ್ಟಿದೆ. ಇದರ ನೇತೃತ್ವವಹಿಸಿರುವ ರಂಜನ್ ಜಿ ಗೌಡರವರು ಅಪಾರ ಖರ್ಚುಮಾಡಿ ಈ ಕಂಬಳವನ್ನು ಮಾಡಿಸುತ್ತಿದ್ದಾರೆ. ಅಂದು ಗಂಗಾಧರ ಗೌಡರವರು ಕರೆಯಲ್ಲಿ ಓಡಿ ಉದ್ಘಾಟನೆ ಮಾಡಿದ್ದರು, ಇವತ್ತು ಇವರ ಮಗ ರಂಜನ್ ಗೌಡರವರು ಅದೇ ಹುಮ್ಮಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ರೆಹಮಾನ್,ಅಧ್ಯಕ್ಷರು, ರೆಹಮಾನಿಯ ಜುಮ್ಮಾಮಸೀದಿ ಕಾಜೂರುರವರು ಅಭಿನಂದನೆ ಸಲ್ಲಿಸಿದ್ರು. ಸ್ವಾಗತ ಸಮಿತಿ ಅಧ್ಯಕ್ಷ ಖಾಸೀಂ, ತುಂಗಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕಿಶೋರ್ ವಳಂಬ್ರ, ಭರತ್ ಕುಮಾರ್, ಪುಟ್ಟಣ್ಣ ಪೂರ್ಜೆ, ಬದ್ರುದ್ದಿನ್ ಕಾಜೂರ್ ಮುಂತಾದವರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಪದಾದಿಕಾರಿಗಳಾದ ಕಿಶೋರ್ ವಳಂಬ್ರ, ಭರತ್ ಕುಮಾರ್ ಆಣಿಬೆಟ್ಟು, ಮಧುಕರ್ ಸುವರ್ಣ, ಸೀತಾರಾಮ ಹಾರ್ತಜೆ, ತುಂಗಪ್ಪ ಪೂಜಾರಿ ಕಾಜೂರು, ವಿನಯಚಂದ್ರ ಪಡೆಂಕಲ್ಲು,ಹಸೈನರ್ ಬಾವಳಿಮನೆ, ಕಿಶೋರ್ ಊರ್ಜೆ,ಆನಂದಗೌಡ ಮಯರ್ನೋಡಿ, ದೇಜಪ್ಪಗೌಡ ಹೊಸಗದ್ದೆ, ಚಂದ್ರಶೇಖರ್ ಗೌಡ ಹಾರ್ತಜೆ, ವಿಜಯ್ ಗೌಡ ಪಡೆಂಕಲ್ಲು, ಅಜೀಜ್ ಪಾದೆಗುತ್ತು, ಯೋಗೀಶ್ ಗೌಡ ಪಡೆಂಕಲ್, ಹರೀಶ್ ಗೌಡ ಪಡೆಂಕಲ್, ರಾಮಣ್ಣಗೌಡ ದೇವರಮಾರು, ಹಮೀದ್ ಬಂಗಾಡಿ, ಬಾಬು ಎಂ ಕೆ ಕುದ್ಕೋಳಿ, ರಮೇಶ್ ಬಾರೋಡಿ, ಸೇಸಪ್ಪ ಗೌಡ, ಕಿಶೋರ್ ಗೌಡ ದೇರಾಜೆ, ಅಶ್ರಫ್ ಬಂಗಾಡಿ, ಸುಲೈಮಾನ್ ಬಂಗಾಡಿ, ಜಯಂತ್ ನಡುಬೈಲು, ಜಮಲ್ ಬಂಗಾಡಿ, ಕಂಬಳ ಓಟಗಾರ ಮಹಮ್ಮದ್,ನೇಮಿರಾಜ್ ಕಿಲ್ಲೂರು ಹೀಗೆ ಎಲ್ಲರನ್ನೂ ಕೂಡ ಪ್ರೀತಿಯಿಂದ ಸ್ವಾಗತಿಸಲಾಯಿತು.