ಮಡಂತ್ಯಾರು ಜೆಸಿಐ ಬಾಂಧವ್ಯ ಇದರ ಆಶ್ರಯದಲ್ಲಿ ಮಹಿಳಾ ಮಂಡಲ ಮಡಂತ್ಯಾರು ಇವರ ಸಹಯೋಗದೊಂದಿಗೆ ಮಹಿಳಾ ದಿನಾಚರಣೆ

0

ಮಡಂತ್ಯಾರು : ಜೆಸಿಐ ಮಡಂತ್ಯಾರು ಮತ್ತು ಮಹಿಳಾ ಮಂಡಲ ಮಡಂತ್ಯಾರು ಇವರ ಜಂಟಿ ಆಶ್ರಯದಲ್ಲಿ ಶಿಶು ವಿಹಾರ ಮಹಿಳಾ ಮಂಡಲ ಮಡಂತ್ಯಾರು ಇದರ ಸಭಾಂಗಣದಲ್ಲಿ ಮಾ.14 ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಲೂಸಿ ಕಾರ್ಲೊ ಇವರು ಉದ್ಘಾಟಿಸಿ ಮಾತನಾಡಿ ಮಹಿಳಾ ದಿನಾಚರಣೆಯ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಲಯ ಗೋಗ್ರೀನ್ ವಿಭಾಗದ ನಿರ್ದೇಶಕರಾದ ಜೇಸಿ ನವೀನ್ ಕೊಡ್ಲಕ್ಕೆ ಇವರು ಮಹಿಳೆಯರಿಗೆ ಇತ್ತೀಚೆಗೆ ಸಿಗುತ್ತಿರುವಂತಹ ಪ್ರೋತ್ಸಾಹದ ಬಗ್ಗೆ ಮಾತನಾಡಿದರು. ಘಟಕ ಅಧ್ಯಕ್ಷರಾದ ಜೆಸಿ ಅಶೋಕ್ ಗುಂಡಿಯಲ್ಕೆ ಮಾತನಾಡಿ ಮಹಿಳೆಯರಿಗೆ ದೇಶದಲ್ಲಿ ಸಿಗುತ್ತಿರುವಂತಹ ಗೌರವ ಪ್ರಾಧಿನ್ಯತೆಯ ಬಗ್ಗೆ ಅದರೊಟ್ಟಿಗೆ ಮಹಿಳಾ ಮಂಡಲ ಮಡಂತ್ಯಾರಿನ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಜೇಸಿ ಅಕ್ಷತ ಗಿರೀಶ್ ಇವರನ್ನು ಘಟಕದ ಪರವಾಗಿ ಗೌರವಿಸಲಾಯಿತು. ನಂತರ ಮಾತನಾಡಿದ ಇವರು ಜೇಸಿ ಸಂಸ್ಥೆ ಮಹಿಳೆಯರಿಗೆ ನೀಡುತ್ತಿರುವಂತಹ ಅವಕಾಶ ಅದೇ ರೀತಿ ಸಮಾಜದಲ್ಲಿ ಮಹಿಳೆಯರಿಗೆ ಪ್ರತಿ ಕ್ಷೇತ್ರದಲ್ಲೂ ಒಂದಲ್ಲ ಒಂದು ರೀತಿಯ ಅವಕಾಶಗಳು ಸಿಗುವ ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಈ ಸಂದರ್ಭದಲ್ಲಿ ತೆರೆ ಮೆರೆಯ ಸಾಧಕರಾಗಿರುವಂತಹ ಪುಂಜಾಲಕಟ್ಟೆ ಆರಕ್ಷಕ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶ್ರೀಮತಿ ರಮ್ಯಾ ಎಂ. ಹಾಗೂ ಮಡಂತ್ಯಾರು ಮೆಸ್ಕಾಂ ಇದರ ಕಾರ್ಯ ಮತ್ತು ಪಾಲನ ಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ ಲೀಲಾವತಿ ಹಾಗೂ ಶ್ರೀಮತಿ ಶಿಲ್ಪಾ ಇವರನ್ನ ಗೌರವಿಸಲಾಯಿತು. ಜೇಸಿ ಮಡಂತ್ಯಾರಿನ ಮಹಿಳಾ ಜೇಸಿ ಸಂಯೋಜಕಿ ಶ್ರೀಮತಿ ಅಮಿತಾ ಅಶೋಕ್ ಸ್ವಾಗತಿಸಿ, ಜೇಸಿ ವಿಕೇಶ್ ಮಾನ್ಯ ಧನ್ಯವಾದಗೈದರು ಜೇಸಿ ಆರತಿ ಲಕ್ಷ್ಮಣ್ ಇವರು ಜೇಸಿವಾಣಿಯನ್ನು ವಾಚಿಸಿದರು.

LEAVE A REPLY

Please enter your comment!
Please enter your name here