


ಗರ್ಡಾಡಿ:ಮೂರ್ತೆದಾರರ ಸೇವಾ ಸಹಕಾರ ಸಂಘ ಗುರುವಾಯನಕೆರೆ ಇದರ ಉದ್ಘಾಟನೆ ಮಾ.11 ರಂದು ಗರ್ಡಾಡಿಯಲ್ಲಿ ನಡೆಯಿತು.
ಮಾಜಿ ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿದರು, ಗಣಕ ಯಂತ್ರ ವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು, ದ. ಕ. ಜಿಲ್ಲಾ ಮೂರ್ತೆದಾರರ ಸಹಕಾರ ಮಹಾ ಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಪಾಲು ಬಂಡವಾಳ ಪತ್ರ ವಿತರಿಸಿದರು. ಗುರುವಾಯನಕೆರೆ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಹಂಸಗಿರಿ ಶಿವ ದರ್ಶನ್ ಅಗ್ರೋ ಇಂಡಸ್ಟ್ರಿಸ್ ಮಾಲಕ ಬಾಲಕೃಷ್ಣ ನಾಯಕ್, ಪಡಂಗಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮ್ಯಾಕ್ಸ್ ಸಿಕ್ವೆರಾ, ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ, ಪಡಂಗಡಿ ಗಾರ್ಡಡಿ ಬಿಲ್ಲವ ಸಂಘದ ಅಧ್ಯಕ್ಷ ವಸಂತ
ಬಿ. ಬಂಗೇರ, ವೇಣೂರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಯಿಮಜಲು, ಉದ್ಯಮಿ ಅಬ್ಬಾಸ್ ಪಜೆಮಾರು, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭಾ ಸಾಲಿಯಾನ್ ಮೊದಲಾದವರು ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷ ರತ್ನಾಕರ್, ನಿರ್ದೇಶಕರುಗಳಾದ ದಿನೇಶ್ ಬಂಗೇರ, ಲತಾ ಎನ್. ಕೋಟ್ಯಾನ್, ಯೋಗೀಶ್ ಪೊಯ್ಯೇಗುಡ್ಡೆ, ಲಲಿತಾ, ಜಯರಾಜ್, ಶ್ರೀಧರ, ವಸಂತ ಪೂಜಾರಿ, ವಿಶ್ವನಾಥ ಪೂಜಾರಿ, ವ್ಯವಸ್ಥಾಪಕಿ ನವ್ಯ, ಸಿಬ್ಬಂದಿ ಸುರಕ್ಷಾ ಮತ್ತು ಸದಸ್ಯರು ಹಾಜರಿದ್ದು ಸಹಕರಿಸಿದರು, ಕೃಷ್ಣಪ್ಪ ಪೂಜಾರಿ ಹೊಸಮನೆ ಸ್ವಾಗತಿಸಿ, ಪವಿತ್ರ ಕುಂಡದಬೆಟ್ಟು ವಂದಿಸಿದರು. ಚಂದ್ರಹಾಸ ಬಳಂಜ ನಿರೂಪಿಸಿದರು,