ಉಜಿರೆ: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಉಜಿರೆಯ ಎಸ್. ಡಿ. ಯಂ. ತಾಂತ್ರಿಕ ಮಹಾವಿದ್ಯಾಲಯ, ದಕ್ಷಿಣ ಕನ್ನಡ ವಿಜ್ಞಾನ ಘಟಕ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸಂಘ ಹಾಗೂ ಇಸ್ರೋದ ಸಹಯೋಗದೊಂದಿಗೆ “ಸ್ಪೇಸ್ ಆನ್ ವೀಲ್ಸ್ ಹಾಗೂ ಮೊಬೈಲ್
ಪ್ಯಾನೆಟೋರಿಮ್” ಎಂಬ ಬಾಹ್ಯಾಕಾಶ ಸಂಬಂಧಿತ ವಿಚಾರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಾಹ್ಯಾಕಾಶದ ವಿಶೇಷತೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾ 14 ಮತ್ತು 15 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ4 ರ ವರೆಗೆ ಎಸ್. ಡಿ. ಯಂ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ವಿಜ್ಞಾನಿಗಳಾದ ಶ್ರೀನಿವಾಸ್ ರವರು ಭಾಗವಹಿಸುತ್ತಿದ್ದು, ಎಸ್. ಡಿ. ಯಂ ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ರವರು ಅಧ್ಯಕ್ಷತೆ ವಹಿಸಲಿರುವರು. ಅಭ್ಯಾಗತರಾಗಿ ಎಸ್. ಡಿ. ಯಂ. ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ರವರು ಭಾಗವಹಿಸಲಿದ್ದಾರೆ.
ಈ ಪ್ರಾತ್ಯಕ್ಷಿಕೆಗೆ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ರವರು ಪ್ರಕಟಣೆಯಲ್ಲಿ
ತಿಳಿಸಿರುತ್ತಾರೆ. ಮಾಹಿತಿಗಾಗಿ ಡಾ. ಬಸವ (9964279438) ಇವರನ್ನು ಸಂಪರ್ಕಿಸಬಹುದು.
ಮಾ.14-15: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ “ಸ್ಪೇಸ್ ಆನ್ ವೀಲ್ಸ್ ಹಾಗೂ ಮೊಬೈಲ್ ಪ್ಯಾನೆಟೋರಿಮ್” ಸಂಬಂಧಿತ ವಿಚಾರಗಳ ಪ್ರಾತ್ಯಕ್ಷಿಕೆ
p>