
ಬೆಳ್ತಂಗಡಿ ಮುಖ್ಯರಸ್ತೆಯ ಸುರೇಂದ್ರ ಮ್ಯಾನ್ಶನ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಹೋಟೆಲ್ ಶ್ರೀ ದುರ್ಗಾ ಡೆಲಿಕೆಸಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರವರು ಮಾ.10 ರಂದು ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ, ಬೆಳ್ತಂಗಡಿ ಪಟ್ಟಣ ಪಂ. ಅಧ್ಯಕ್ಷೆ ರಜನಿ ಕುಡ್ವ ಭಾಗವಹಿಸಿ ಶುಭಹಾರೈಸಿದರು.
ಬೆಳಿಗ್ಗೆ ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಯಶೋಧರ ಬಂಗೇರ, ಪ್ರವೀಣ್ ಹಾಗೂ ಮನೆಯವರು, ಶ್ರೀ ದುರ್ಗಾ ಗ್ರ್ಯಾಂಡ್ ಹೋಟೆಲ್ ನೌಕರ ವೃಂದದವರು, ಗ್ರಾಹಕರು ಉಪಸ್ಥಿತರಿದ್ದರು.

