


ಬೆಳ್ತಂಗಡಿ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಬೆಳ್ತಂಗಡಿ, ಮಹಿಳಾ ವೃಂದ ಬೆಳ್ತಂಗಡಿ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳಾ ವೃಂದ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಜಿರೆ ಬೆನಕ ಆಸ್ಪತ್ರೆಯ ಕಿರಿಯ ಸರ್ಜನ್, ಇತ್ತೀಚೆಗೆ ಯಶಸ್ವಿ ಕಿ ರಂಧ್ರ ಶಸ್ತ್ರಚಿಕಿತ್ಸೆಯ ಮೂಲಕ 1.6 ಕೆ.ಜಿ ಗೆಡ್ಡೆಯನ್ನು ಹೊರತೆಗೆದ ಸಾಧಕಿ, ಡಾ.ಅಂಕಿತಾ ಭಟ್ ಅವರಿಗೆ ‘ಸ್ಪೂರ್ತಿ -2023’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲಿಗರಾಗಿದ್ದ ಇವರು ಮುಂದಕ್ಕೆ ಬೆಂಗಳೂರು, ಕೊಚ್ಚಿಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಯನ್ನು ಮಾಡಿ ಆದರ್ಶರಾಗಿದ್ದಾರೆ.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಮನೋರಮ ಭಟ್, ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ ಶಂಕರ್ ರಾವ್, ನಿಕಟಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್ , ಮಹಿಳಾ ವೃಂದದ ಅಧ್ಯಕ್ಷರಾದ ಆಶಾ ಸತೀಶ್ , ಮಹಿಳಾ ಒಕ್ಕೂಟ ಅಧ್ಯಕ್ಷರಾದ ಸವಿತಾ ಜಯದೇವ್ , ಜೇಸಿಐ ಕಾರ್ಯದರ್ಶಿ ಸುಧೀರ್ ಕೆ.ಎನ್ ಪೂರ್ವಾಧ್ಯಕರಾದ ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ಅಶೋಕ್ ಕುಮಾರ್ ಎಮ್.ಪಿ ಉಪಸ್ಥಿತರಿದ್ದರು.