


ಧರ್ಮಸ್ಥಳ : ಬ್ಯಾಂಕ್ ಆಫ್ ಬರೋಡಾದ ಸಂಚಾರಿ ವಾಹನ ಹಸ್ತಾಂತರ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ ಯ ಟ್ರಸ್ಟ್ ನಿಂದ ಸಿರಿ ಸಂಸ್ಥೆ ಗೆ ಕೊಡಲ್ಪಡುವ ಸಂಚಾರಿ ವಾಹನಗಳ ಹಸ್ತಾಂತರ ಸಮಾರಂಭ ಮಾ. 9 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕರಾದ ಗಾಯತ್ರಿ ಆರ್, ಸಿರಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕರಾದ ಕೆ.ಎನ್ ಜನಾರ್ದನ್, ಸಮುದಾಯ ಅಭಿವೃದ್ಧಿ ಯ ಜೈ ಶಂಕರ್ ಶರ್ಮ , ಸಿರಿ ಸಂಸ್ಥೆಯ ನಿರ್ದೇಶಕ ಪ್ರಸನ್ನ ಹಾಗೂ ಧರ್ಮಸ್ಥಳ ಬ್ಯಾಂಕ್ ಆಫ್ ಬರೋಡದ ಶಾಖೆಯ ವ್ಯವಸ್ಥಾಪಕರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
