


ಸುಲ್ಕೇರಿ : ಇಲ್ಲಿಯ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಸಮಾರಂಭ ಇತ್ತೀಚೆಗೆ ಜರುಗಿತು.


ಶ್ರೀ ಕ್ಷೇತ್ರ ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಧಾನಿಗಳಾದ ರವೀಂದ್ರ ಪಾಟೀಲ್ ನಾಸಿಕ್ ಮತ್ತು ಶ್ರೀಮತಿ ಕಿರಣ ಪಾಟೀಲ್ ನಾಸಿಕ್ ಹಾಗೂ ತುಮಕೂರಿನ ಜಿ.ಎಸ್.ರಾಜೇಂದ್ರ ಕುಮಾರ್, ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಎ.ಜೀವಂಧರ ಕುಮಾರ್, ವಾಸ್ತು ತಜ್ಞರಾದ ಸುದರ್ಶನ ಇಂದ್ರರು ಪಾದೂರು, ಹಿರಿಯರಾದ ಶಾಂತಿರಾಜ ಜೈನ್ ಕೂಷ್ಮಾಂಡಿನಿ ನಲ್ಲೂರು, ವಕೀಲರಾದ ಶಶಿಕಿರಣ್ ಜೈನ್ , ರವಿರಾಜ ಕೆಲ್ಲ ಸನ್ಮತಿ ನಿಲಯ, ಜಯವರ್ಮ ಬುಣ್ಣು ದುಗ್ಗತಿಕಾರಿ ಮನೆ, ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರರಾದ ಎನ್.ರವಿರಾಜ ಹೆಗ್ಡೆ ನಾವರ ಗುತ್ತು ಮುಂತಾದ ಪ್ರಮುಖರು ಭಾಗವಹಿಸಿದ್ದರು. ಬಸದಿಗೆ ಸಂಬಂಧಿಸಿದ ಜೈನ ಶ್ರಾವಕ ಶ್ರಾವಕಿಯರ ನೇತೃತ್ವದಲ್ಲಿ ಪೂಜೆ ನಡೆಯಿತು.
ಬಸದಿ ಪುರೋಹಿತರಾದ ಹರ್ಷ ಇಂದ್ರ ಮತ್ತು ಪದ್ಮ ಇಂದ್ರರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.