ಧರ್ಮಸ್ಥಳ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಉದ್ದಿಮೆದಾರರ ಕಾರ್ಯಾಗಾರ

0

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಸಿ. ಟ್ರಸ್ಟ್ ವತಿಯಿಂದ ಮಾ.8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಧರ್ಮಸ್ಥಳದಲ್ಲಿ ಮಹಿಳಾ ಉದ್ದಿಮೆದಾರರ ಸಮಾವೇಶ ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮಾವೇಶ ಉದ್ಘಾಟಿಸಿದರು. ಭಾರತೀಯ ಸಣ್ಣ ಉದ್ದಿಮೆಗಳ ಬ್ಯಾಂಕ್ (ಸಿಡ್ಬಿ)ಅಧ್ಯಕ್ಷ ಶಿವಸುಬ್ರಹ್ಮಣ್ಯ ರಾಮನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಅಮೃತ ಸಿಂಚನ `ಪ್ರಯಾಸ್ ಯೋಜನಾ’ ಎನ್ನುವ ಮಹಿಳಾ ಉದ್ದಿಮೆದಾರರ ಯಶೋಗಾಥೆಗಳ ಪುಸ್ತಕ ಬಿಡುಗಡೆಗೊಳಿಸಿದರು. ಧರ್ಮಸ್ಥಳದ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ , ಸಿಡ್ಬಿ ಮುಖ್ಯ ಪ್ರಬಂಧಕ ರವಿ ತ್ಯಾಗಿ, ಉಪ ಪ್ರಬಂಧಕ ನಿತೀಶ್ ಶುಕ್ಲ, ಗ್ರಾಮಾಭಿವೃದ್ಧಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್ ಮಂಜುನಾಥ್, ಮುಖ್ಯ ಕಾರ್ಯನಿವಾಹಕ ಅನಿಲ್ ಕುಮಾರ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಲ ಪತ್ರ ವಿತರಿಸಲಾಯಿತು. ಉದ್ದಿಮೆದಾರರಿಗೆ ಬೇಕಾಗುವ ಶಾಸನಾತ್ಮಕ ಕಾನೂನು ಕುರಿತು ಅರಿವು ವಿಚಾರ ಮಂಡನೆ ಗೋಷ್ಠಿ ನಡೆಯಿತು. ಲೆಕ್ಕ ಪತ್ರ ನಿರ್ವಹಣೆ ಬಗ್ಗೆ ಪ್ರಸನ್ನ ಯು., ಇನ್ ಕಮ್ ಟ್ಯಾಕ್ಸ್ ಬಗ್ಗೆ ಚಾರ್ಟೆಡ್ ಅಕೌಂಟೆಂಟ್ ಅನಂತ ಭಟ್, ಜಿ ಎಸ್ ಟಿ ಬಗ್ಗೆ ಶ್ರೀಮತಿ ಡ್ಯಾಫಿನಿ ಸ್ಟೇಲ್ಲಾ ಡಿ ಸೋಜ, ಲೆಕ್ಕ ಪತ್ರ ಶಾಂತಾರಾಮ ಆರ್. ಪೈ ವಿಚಾರ ಗೋಷ್ಠಿ ಮಂಡಿಸಿದರು. ಮಹಿಳಾ ಉದ್ದಿಮೆದಾರರು ಅನುಭವ ಹಂಚಿಕೊಂಡರು.

LEAVE A REPLY

Please enter your comment!
Please enter your name here