ಪ್ರಾಥಮಿಕ ಶಾಲಾ ಮಕ್ಕಳ ಮೌಲ್ಯಾಂಕ ಪರೀಕ್ಷೆ ಕೇಂದ್ರಗಳನ್ನು ಸ್ಥಳೀಯವಾಗಿ ಮಾಡಲು ಹೆತ್ತವರ ಒತ್ತಾಯ

0

ಬೆಳಾಲು :ಮಾರ್ಚ್ ತಿಂಗಳ 13 ರಿಂದ ಆರಂಭವಾಗುವ, 5 ಮತ್ತು 8 ನೇ ತರಗತಿಗಳಿಗೆ ಸರಕಾರ ನಡೆಸುವ ಮೌಲ್ಯಾಂಕನ ಪರೀಕ್ಷೆಗೆ ಕೇಂದ್ರವಾಗಿ , ಬೆಳಾಲು ಗ್ರಾಮದ ಶಾಲಾ ಮಕ್ಕಳಿಗೆ ಬದನಾಜೆ ಶಾಲೆಯನ್ನು ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ.
ಈ ಶಾಲೆಗೆ ಬೆಳಾಲಿನ ಕೊಲ್ಪಾಡಿ, ಮಾಯ , ಪೆರಿಯಡ್ಕ , ಬೆಳಾಲು ಪ್ರೌಢಶಾಲೆ ಮತ್ತು ಬೆಳಾಲು ಸರಸ್ವತಿ ಶಾಲೆ ಒಟ್ಟು ಐದು ಶಾಲೆಗಳ ಮಕ್ಕಳು ಹೋಗಬೇಕು.
ನಮ್ಮ ಗ್ರಾಮದ ಮಕ್ಕಳಿಗೆ ನಮ್ಮ ಗ್ರಾಮದ ಒಂದು ಶಾಲೆಯನ್ನೇ ಕೇಂದ್ರವಾಗಿ ಮಾಡಲು ಏನು ತೊಂದರೆ ಎಂಬ ಬಗ್ಗೆ ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಕೊಲ್ಪಾಡಿ, ಮಾಯ, ಪೆರಿಯಡ್ಕ ಈ ಶಾಲೆಗಳ ಬಹಳಷ್ಟು ಮಕ್ಕಳಿಗೆ ಬದನಾಜೆ ಶಾಲೆಗೆ ಎಂಟರಿಂದ ಹತ್ತು ಕಿಮೀ. ಕ್ರಮಿಸಬೇಕಾದ ದುಸ್ಥಿತಿ.

ಮೌಲ್ಯಾಂಕನ ಪರೀಕ್ಷೆಯ ಹೆಸರಲ್ಲಿ ನಮ್ಮ ಮಕ್ಕಳಿಗೆ ದೂರವಾಗಿರುವ ಪರೀಕ್ಷಾ ಕೇಂದ್ರವನ್ನು ತಲಪುವುದೇ ಪರೀಕ್ಷೆಯಾಗಿದೆ. ತಕ್ಷಣ ಈ ಬಗ್ಗೆ ಇಲಾಖಾಧಿಕಾರಿಗಳು ಗಮನಹರಿಸುವಂತೆ ಬೆಳಾಲಿನ ಪೋಷಕರು ಪತ್ರಿಕೆಯ ಮೂಲಕ ಅಳಲನ್ನು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here