ಮಾಯ ದೇವಸ್ಥಾನದ ಜಾತ್ರೋತ್ಸವಕ್ಕೆ ಚಾಲನೆ ಧ್ವಜಾರೋಹಣ

0

ಬೆಳಾಲು : ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಮಾ.3 ರಿಂದ 7 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು
ಮಾ.3 ರಂದು ರಾತ್ರಿ ಅಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ಮೂಲಕ ಪ್ರಾರಂಭಗೊಂಡಿತು. ಮೊದಲು ತಂತ್ರಿಗಳ ಸ್ವಾಗತ, ತೋರಣ ಮುಹೂರ್ತ ನೆರವೇರಿತು. ನಂತರ ಬಲಿ ಉತ್ಸವ ಜರಗಿತು.


ಬೆಳಿಗ್ಗೆ ಮಾಯ ಗುತ್ತು ಮನೆಯಲ್ಲಿ ದೈವಗಳಿಗೆ ಕಲಶಪರ್ವ, ದೇವಸ್ಥಾನದಲ್ಲಿ ಗಣಹೋಮ, ಬಾಲೆ ಮೊಟ್ಟಿಕಲ್ಲು ಪಾದಪೂಜೆ, ಭಜನೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾಯ, ನಿಂತಿಕಲ್ಲು, ಕೊಲ್ಪಾಡಿ ಅಂಗನವಾಡಿ ಮಕ್ಕಳಿಂದ ನೃತ್ಯ ವೈವಿದ್ಯ, ಶಶಿಧರ್ ಓಡಿಪ್ರೊಟ್ಟು ಬಳಗದಿಂದ ಭಕ್ತಿ ಭಾವ ಗಾನ, ನಂತರ ಅಮ್ಮ ಕಲಾವಿದೆರ್ ಕುಡ್ಲ ರವರಿಂದ ಅಲೆ ಬುಡಿಯೆರ್ ಗೆ ನಾಟಕ ಪ್ರದರ್ಶನಗೊಂಡಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಭಜನಾ ಮಂಡಳಿ, ವರಮಹಾಲಕ್ಷ್ಮಿ ಪೂಜಾ ಸಮಿತಿ, ಮಾಯ ಫ್ರೆಂಡ್ಸ್ ಪದಾಧಿಕಾರಿಗಳು, ಸದಸ್ಯರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು.

p>

LEAVE A REPLY

Please enter your comment!
Please enter your name here