ಕಳಿಯ ಮೆದಿನ ಮನೆಯಲ್ಲಿ ದೈವಗಳಿಗೆ ಧರ್ಮನೇಮೋತ್ಸವ

0

ಗೇರುಕಟ್ಟೆ : ಕಳಿಯ ಗ್ರಾಮದ ಮೆದಿನ ಗುತ್ತು ಮನೆ ಶ್ರೀಮತಿ ನೀಲಮ್ಮ ಶೆಟ್ಟಿ ಮನೆಯ ಸ್ಥಳ ದೈವಗಳಿಗೆ ಧರ್ಮನೇಮೋತ್ಸವ ಫೆ.25 ರಿಂದ ಫೆ.26 ರ ರಾತ್ರಿ ತನಕ ನರ್ತನ ಸೇವೆ ಜರುಗಿತು.


ಮೆದಿನ ಮನೆಯ ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ದೈವಗಳಿಗೆ ಫೆ.25 ರಂದು ಪೂರ್ವಾಹ್ನ ದೈವಗಳ ಸನ್ನಿಧಿಯಲ್ಲಿ ಗಣ ಹೋಮ, ಶುದ್ಧ ಕಲಶ ಪರ್ವ ರಾತ್ರಿ ಕೊಡಮಾಣಿತ್ತಾಯ, ರಕ್ತೇಶ್ವರಿ ಮಹಾಕಾಳಿ ದೈವಗಳಿಗೆ ಹಾಗೂ ಫೆ.26 ರಾತ್ರಿ ರಂದು ಕಲ್ಲುರ್ಟಿ ಪಂಜುರ್ಲಿ, ಜೋಡು ಗುಳಿಗ ಮತ್ತು ಅಜ್ಜೇರ್ ದೈವಗಳಿಗೆ ವೇ.ಮೂ. ಶ್ರೀ ರಾಘವೇಂದ್ರ ಅಸ್ರಣ್ಣರ ಪೌರೋಹಿತ್ಯದಲ್ಲಿ ಸ್ಥಳ ದೈವಗಳಿಗೆ ಗಗ್ಗರ ಸೇವಾ ಆರಾಧನೆ ನಡೆಯಿತು. ಕುಟುಂಬದ ಸದಸ್ಯರು, ಹಿತೈಷಿಗಳು ಆಗಮಿಸಿ ದೈವ ಆರಾಧನೆಯ ಗಂಧ ಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಶ್ರೀಮತಿ ಸುರೇಖಾ ಮತ್ತು ರಾಜು ಶೆಟ್ಟಿ ದಂಪತಿ,ಮಕ್ಕಳು ಹಾಗೂ ಕುಟುಂಬಸ್ಥರು ಆಗಮಿಸಿದ ಹಿತೈಷಿಗಳನ್ನು ಸತ್ಕರಿಸಿದರು.

LEAVE A REPLY

Please enter your comment!
Please enter your name here