ಫೆ. 26: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬೃಹತ್ ಆರೋಗ್ಯ ಮೇಳ

0

ಪುಂಜಾಲಕಟ್ಟೆ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ವತಿಯಿಂದ ಬೃಹತ್ ಆರೋಗ್ಯ ಮೇಳ ಪುಂಜಾಲಕಟ್ಟೆ ಆರೋಗ್ಯ ಕೇಂದ್ರದ ವಠಾರದಲ್ಲಿ ಫೆ. 26 ರಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ, ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಶಾಸಕ ರಾಜೇಶ್ ನಾಯ್ಕ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ.ಜಿ.ಪಂ. ಎಂ.ತುಂಗಪ್ಪ ಬಂಗೇರ ತಿಳಿಸಿದರು.

ಅವರು ಈ ಹಿಂದೆ ನಡೆಸಿದ ಆರೋಗ್ಯ ಮೇಳ ದಾಖಲೆಯನ್ನು ಬರೆದಿತ್ತು. ಹಾಗಾಗಿ ಈ ಬಾರಿಯೂ ಅತ್ಯಂತ ಯಶಸ್ವಿಯಾದ ಆರೋಗ್ಯ ಮೇಳವನ್ನು ನಡೆಸುವ ಉದ್ದೇಶ ಹೊಂದಲಾಗಿದೆ. ಜನರಿಗೆ ಆರೋಗ್ಯ ಬಗ್ಗೆ ಮಾಹಿತಿ ಕೊರತೆ ಇದೆ, ಜೊತೆಗೆ ರೋಗಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಮೂಲಕ ಈ ಗ್ರಾಮೀಣ ಭಾಗದ ಜನರಿಗೆ ಸದುಪಯೋಗವಾಗಬೇಕು ಎಂಬ ನಿಟ್ಟಿನಲ್ಲಿ ಆರೋಗ್ಯ ಮಾಡುವ ಉದ್ದೇಶವನ್ನು ಹೊಂದಿದೆ.

LEAVE A REPLY

Please enter your comment!
Please enter your name here