ಬೆಳ್ತಂಗಡಿ: ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾರಥೋತ್ಸವದ ಶುಭ ಸಂದರ್ಭದಲ್ಲಿ ಸುವರ್ಣ ಸಾಂಸ್ಕೃತಿಕ ವೈಭವದ ಸಂಭ್ರಮವು ಫೆ.20 ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನಡೆಯಿತು.
13ನೇ ವರ್ಷದ ಈ ಸುವರ್ಣ ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ನಾಡಿನ ಪ್ರತಿಷ್ಠಿತ ಮೂರು ಕಲಾ ಸಾಧಕರಾದ ಭರತನಾಟ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ನೃತ್ಯ ಗುರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಮಲಾಕ್ಷ ಆಚಾರ್, ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅರುವ ಕೊರಗಪ್ಪ ಶೆಟ್ಟಿ, ಸ್ಯಾಕ್ಸೋಫೋನ್ ಮಾಂತ್ರಿಕ, ರಾಜ್ಯದ ಸ್ಯಾಕ್ಸೋಫೀನ್ ವಾದನದಲ್ಲಿ ಏಕೈಕ ಆಕಾಶವಾಣಿ ಎ ಗ್ರೇಡ್ ಕಲಾವಿದ ಪ್ರಕಾಶ್ ದೇವಾಡಿಗರು ಸೇರಿ ಮೂರು ಮಂದಿಗೆ ಸುವರ್ಣ ರಂಗ ಸಮ್ಮಾನ್ 2023 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಬಳ್ಳಮಂಜ ಆನುವಂಶೀಯ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಧರ್ಮಸ್ಥಳ ಮುತ್ಸುದಿ ಭುಜಬಲಿ ಬಿ. ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣ, ಸುವರ್ಣ ಆಕೇರ್ಡ್ ಮಾಲಕ ನಾಣ್ಯಪ್ಪ ಪೂಜಾರಿ, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಬೇಬಿ ನಾಣ್ಯಪ್ಪರವರು ಉಪಸ್ಥಿತರಿದ್ದರು.
ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಲ್ಕಿ ನವವೈಭವ ಕಲಾವಿದೆರ್ ತುಳುನಾಡ ತುಡರ್ ಎಂಬ ತುಳುನಾಡಿನ ಸತ್ಯದ ಕಥೆಯನ್ನು ಪ್ರದರ್ಶನಗೊಂಡಿತು.