ನಿಡ್ಲೆ: ಶೌರ್ಯ ವಿಪತ್ತು ತಂಡ ನಿಡ್ಲೆ, ನಿಸರ್ಗ ಯುವಜನೇತರ ಯುವಕ ಸಂಘ ಬರೆಂಗಾಯ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಕೆ.ಕೆ. ಜಯಪ್ರಕಾಶ ಇವರ ಮಾರ್ಗದರ್ಶನದೊಂದಿಗೆ ನಿಡ್ಲೆ ಸುರಕ್ಷಿತಾರಣ್ಯ ವ್ಯಾಪ್ತಿಯ ಪಾರ್ಪಿಕಲ್‌ನಿಂದ ಕುತ್ಯಡ್ಕ ದವರೆಗೆ ಹಾಗೂ ಬೂಡುಜಾಲು ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಪಾದಯಾತ್ರಿಗಳು ಬಿಸಾಡಿದ ನೀರಿನ ಬಾಟಲುಗಳು ಹಾಗೂ ಇನ್ನಿತರ ತಿಂಡಿ ತಿನಿಸುಗಳ ಪೊಟ್ಟಣಗಳನ್ನು ಸ್ವಚ್ಛತೆಗೊಳಿಸುವ ಕಾರ್ಯಕ್ರಮ ಫೆ.20 ರಂದು ಜರುಗಿತು.
ಈ ಸಂದರ್ಭದಲ್ಲಿ ಉಪ ವಲಯಾರಣ್ಯಾಧಿಕಾರಿ ಕೆ. ಆರ್. ಅಶೋಕ್ ಕೊಕ್ಕಡ, ಕಳೆಂಜ ಶಾಖೆಯ ಉಪವಲಯಾರಣ್ಯಾಧಿಕಾರಿ ಪ್ರಶಾಂತ್, ನಿಡ್ಲೆ ಅರಣ್ಯ ವೀಕ್ಷಕ ದಾಮೋದರ್, ನಿಸರ್ಗ ಯುವಜನೇತರ ಯುವಕ ಮಂಡಲದ ಸದಸ್ಯ ಪುನೀತ್, ಶೌರ್ಯ ವಿಪತ್ತು ತಂಡದ ಗಿರೀಶ್ ಬಾರೆಗುಡ್ಡೆ, ಕೊರಗಪ್ಪ ಗೌಡ ಪರಹಿತ್ತಿಲು, ನಿಡ್ಲೆ ಗ್ರಾ.ಪಂ. ಸಿಬ್ಬಂದಿ ಶ್ರೀನಿವಾಸ್, ಯುವ ಸಂಘದ ಸದಸ್ಯರು, ಶೌರ್ಯ ವಿಪತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.
p>