ರೆಖ್ಯ: ಅಕ್ರಮ ಗೋ ಸಾಗಾಟ: ನಾಲ್ವರು ಆರೋಪಿಗಳು ಪೊಲೀಸರ ವಶ

0

ರೆಖ್ಯ: ರಾಷ್ಟ್ರೀಯ ಹೆದ್ದಾರಿಯ ಎಂಜಿರ ಮಾರ್ಗವಾಗಿ ಹಾಸನದ ಕಡೆಗೆ ಲಾರಿಯೊಂದರಲ್ಲಿ 10 ಕ್ಕೂ ಅಧಿಕ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಇದರ ಮಾಹಿತಿ ಪಡೆದ ರೆಖ್ಯದ ಬಜರಂಗದಳ ಕಾರ್ಯಕರ್ತರು ಲಾರಿಯನ್ನು ಹಿಂಬಾಲಿಸಿ ,ಉದನೆ ಬಳಿ ಲಾರಿಯನ್ನು ತಡೆಹಿಡಿದಿದ್ದಾರೆ.
ಬಳಿಕ ಈ ಮಾಹಿತಿಯನ್ನು ಕೂಡಲೇ ಬಜರಂಗದಳ ಬೆಳ್ತಂಗಡಿ ತಾಲೂಕು ಮುಖಂಡರಿಗೆ ತಿಳಿಸಿದ್ದು, ತಾಲೂಕು ಸಮಿತಿಯ ಕಾರ್ಯಕರ್ತರು ನೆಲ್ಯಾಡಿ ಪೊಲೀಸರಿಗೆ ವಿಷಯ ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಪೊಲೀಸರು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತಿದ್ದ ವಾಹನ , ನಾಲ್ವರು ಆರೋಪಿಗಳನ್ನು ಹಾಗೂ ಅದರಲ್ಲಿದ್ದ ಗೋವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here