ಉಜಿರೆ: ಅನುಗ್ರಹ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ದಿನಾಚರಣೆ

0

ಉಜಿರೆ: ಮಕ್ಕಳಿಗೆ ಪಾಠದ ಜೊತೆಗೆ ನೀಡುವ ಪಠ್ಯೇತರ ಚಟುವಟಿಕೆಗಳ ಪ್ರದರ್ಶನದ ಇಸಿಎ ಡೇ 2023 ಕಾರ್ಯಕ್ರಮವು ಶಾಲಾ ಸಂಚಾಲಕರಾದ ವಂ.ಫಾ| ಜೇಮ್ಸ್ ಡಿಸೋಜಾರವರ ಅಧ್ಯಕ್ಷತೆಯಲ್ಲಿ ಅನುಗ್ರಹ ಶಾಲಾ ಸಭಾಭವನದಲ್ಲಿ ಅತ್ಯಂತ ಆಕರ್ಷಣೀಯವಾಗಿ ಫೆ.17 ರಂದು ನಡೆಯಿತು.


ತಬಲಾ, ಹಾರ್ಮೋನಿಯಂ, ಕೊಳಲು, ಭರತನಾಟ್ಯ, ಸುಗಮ ಶಾಸ್ತ್ರೀಯ ಸಂಗೀತ, ಕಸೂತಿ ಕೆಲಸಗಳು, ಕರಾಟೆ, ವೆಸ್ಟರ್ನ್ ಮತ್ತು ಫಿಲ್ಮಿಡ್ಯಾನ್ಸ್ ಗಳನ್ನು ವಾರಕೊಮ್ಮೆ ಏಕಕಾಲದಲ್ಲಿ ಆಯಾ ವಿಷಯಗಳ ನುರಿತ ಶಿಕ್ಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಕಲಿಸುವ ತರಗತಿ ಇದಾಗಿದ್ದು ಇವುಗಳ ವಾರ್ಷಿಕ ಪ್ರದರ್ಶನವೇ ಇಸಿಎ ಡೇ. ಮಕ್ಕಳ ಪ್ರಾರ್ಥನೆ ಯ ಬಳಕೆ ಪ್ರಭಾಕರ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಬೆಳ್ತಂಗಡಿಯ ಖ್ಯಾತ ದಂತವೈದ್ಯರಾದ ಡಾ| ಪ್ರಶಾಂತ್ ಕುಮಾರ್, ಸಂಚಾಲಕರು, ಪ್ರಾಂಶುಪಾಲರು ಹಾಗೂ ಎಲ್ಲಾ ಇಸಿಎ ಶಿಕ್ಷಕರ ಜೊತೆ ಗೂಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ವಂ.ಫಾ| ವಿಜಯ್ ಲೋಬೋರವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿ ಶುಭಕೋರಿದರು. ಮುಖ್ಯ ಅತಿಥಿಗಳಾದ ಡಾ| ಪ್ರಶಾಂತ್ ಕುಮಾರ್ ರವರ ಅಭಿನಂದನೆಯ ಬಳಿಕ ಸಂದರ್ಭೊಚಿತವಾಗಿ ಮಾತಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಧ್ಯಕ್ಷೀಯ ಭಾಷಣ ನೀಡಿದ ಶಾಲಾ ಸಂಚಾಲಕರು ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್ ಹಾಗೂ ಎಲ್ಲಾ ಇಸಿಎ ಶಿಕ್ಷಕರು ಉಪಸ್ಥಿತರಿದ್ದರು.
ಪ್ರಭಾಕರ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಮಕ್ಕಳಿಂದ ವೈವಿಧ್ಯಮಯವಾದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

LEAVE A REPLY

Please enter your comment!
Please enter your name here