ಚಾರ್ಮಾಡಿ ಘಾಟ್ ನಲ್ಲಿ ತಪ್ಪಿದ ಭಾರಿ ದುರಂತ 

0

ಚಾರ್ಮಾಡಿ : ಚಾರ್ಮಾಡಿ ಘಾಟಿ ಇಳಿಯುವ ವೇಳೆ ರಾಷ್ಟ್ರೀಯ ಹೆದ್ದಾರಿಯ ಮಠದ ಮಜಲು ಬಳಿ ಪಿಕಪ್ ವಾಹನ ಒಂದು ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದಾಗ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಪ್ರಸಂಗಾವಧಾನತೆಯಿಂದ ಉಂಟಾಗಬಹುದಾದ ಭಾರಿ ಅನಾಹುತ ತಪ್ಪಿಸಿದ ಘಟನೆ ಫೆ.17 ರಂದು ಬೆಳಗ್ಗೆ ನಡೆಯಿತು.
ಮುಂಜಾನೆ ಏಳರ ಸುಮಾರಿಗೆ ಈ ಸ್ಥಳದಲ್ಲಿ  ಧರ್ಮಸ್ಥಳಕ್ಕೆ  ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ಮೂಲಕ  ನೂರಾರು  ಪಾದಯಾತ್ರಿಗಳು ಆಗಮಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ವಾಹನ ಅಡ್ಡಾದಿಡ್ಡಿ ಚಲಿಸುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಸ್ಟಾಲ್ ಸಿಬ್ಬಂದಿ ಹಾಗೂ ಸ್ಥಳೀಯರು ವಾಹನವನ್ನು ಕಲ್ಲು, ಬಡಿಗೆ ಇತ್ಯಾದಿ ಅಡ್ಡ ಇಟ್ಟು  ನಿಯಂತ್ರಣಕ್ಕೆ ತಂದು  ಸಂಭವಿಸಬಹುದಾದ  ಭಾರೀ ಅಪಾಯದಿಂದ ಪಾರಾದ ಘಟನೆ ನಡೆದಿದೆ.  ಇದರಿಂದ ಪಾದಯಾತ್ರಿಗಳು  ದುರಂತದಿಂದ ಪಾರಾದ  ಸಂತಸದಿಂದ ಪಾದಯಾತ್ರೆ ಮುಂದುವರಿಸಿದರು.  ಈ ವೇಳೆ ರಸ್ತೆ ಬದಿಯ ಧರೆಗೆ ಗುದ್ದಿದ ವಾಹನದ ಮುಂಭಾಗ ಜಖಂ ಆಗಿದೆ.

LEAVE A REPLY

Please enter your comment!
Please enter your name here