ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

0

ನಿಡ್ಲೆ: ಸೆಲ್ಕೋ ಸೋಲಾರ್ ಕಂಪನಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು 1989-90ನೇ ಸಾಲಿನ ಪೂರ್ವ ವಿದ್ಯಾರ್ಥಿಗಳ ಸಹಕಾರದಲ್ಲಿ ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಫೆ. 17 ರಂದು ಉದ್ಘಾಟನೆಗೊಂಡಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರೋಟರಿಯ ಮಾಜಿ ಅಧ್ಯಕ್ಷ ಡಿ ಎಂ ಗೌಡ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ ಗೌಡ, ಗ್ರಾಮ ಪಂಚಾಯತಿಯ ಸದಸ್ಯರು, ರೋಟರಿಯ ಕಾರ್ಯದರ್ಶಿಗಳಾದ ರಕ್ಷಾ, ಎಸ್ ಡಿ ಎಂ ಸಿ ಸದಸ್ಯರು, 1989-90ನೇ ಸಾಲಿನ ಪೂರ್ವ ವಿದ್ಯಾರ್ಥಿಗಳಾದ ಶಾಮರಾಜ್, ಗುರು ಪ್ರಕಾಶ್ ರಾವ್, ಅರುಣ್ ಕುಮಾರ್, ಥೋಮಸ್ ಪಿ, ಸೆಲ್ಕೋ ಕಂಪೆನಿಯ ಅಶ್ವಿನ್ ಕುಮಾರ್, ಪೋಷಕರು ,ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಶಾಂತ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಸುಚಿತ್ರ ವಂದಿಸಿದ ಕಾರ್ಯಕ್ರಮವನ್ನು ಶಿಕ್ಷಕ ಶರತ್ ಕುಮಾರ್ ತುಳುಪುಳೆ ನಿರ್ವಹಿಸಿದರು. ಎಲ್ಲ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here