ಗುರುವಾಯನಕೆರೆ: ಕುವೆಟ್ಟು ಗ್ರಾಮದ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವು ಜ. 13 ರಂದು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಜ.13 ರಂದು ಬೆಳಿಗ್ಗೆ ದೈವದ ಭಂಡಾರವನ್ನು ಮೆರವಣಿಗೆ ಮೂಲಕ ದೈವಸ್ಥಾನಕ್ಕೆ ತರಲಾಯಿತು. ಬಳಿಕ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ಪಂಚವಿಂಶತಿ, ಕಲಶಪೂರಣೆ, ಕಲಶಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ, ಧ್ವಜಾರೋಹಣ ನಡೆಯಿತು. ನಂತರ ಕೊಡಮಣಿತ್ತಾಯ ದೈವದ ಬಲಿ ಉತ್ಸವ ಜರುಗಿ, ಮಧ್ಯಾಹ್ನ ಸಾವ೯ಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೈವದ ಬಲಿ ಉತ್ಸವ ನಡೆದು ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ವೈಭವ ಪೂಣ೯ವಾಗಿ ಜರುಗಿತು.ಮರುದಿನ ಬೆಳಿಗ್ಗೆ ಧ್ವಜಾವರೋಹಣ, ಶುದ್ಧಿಕಲಶ ನಡೆಯಿತು.
ಆನುವಂಶಿಕ ಆಡಳಿತ ಮೊಕ್ತೇಸರರಾದ ಸುಖೇಶ್ ಕುಮಾರ್ ಕಡಂಬು ಮತ್ತು ಸಹೋದರ ಕಾಯ೯ಕ್ರಮದ ನೇತೃತ್ವ ವಹಿಸಿದ್ದರು. ಊರ ಹಾಗೂ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.