ಮುಂಡಾಜೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಮಹಿಳಾ ಘಟಕದಿಂದ “ನಾ ನಾಯಕಿ” ಮಹಿಳಾ ಸಮಾವೇಶದ ಪೂರ್ವಬಾವಿ ಸಭೆ

0

ಮುಂಡಾಜೆ :ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಮಹಿಳಾ ಘಟಕದ ವತಿಯಿಂದ ಫೆ. 11 ರಂದು ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ಲಬ್ ಹಾಲ್ ನಲ್ಲಿ “ನಾ ನಾಯಕಿ “ಮಹಿಳಾ ಸಮಾವೇಶದ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷೆ ನಮಿತಾ ಕೆ.ಪೂಜಾರಿ ವಹಿಸಿದ್ದರು.
ಬೆಳ್ತಂಗಡಿಯಲ್ಲಿ”ನಾ ನಾಯಕಿ” ಮಹಿಳಾ ಸಮಾವೇಶ ನಡೆಸುವ ಬಗ್ಗೆ ಚರ್ಚಿಸಲಾಯಿತು
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ ಜಿಲ್ಲಾ ಕಾಂಗ್ರೆಸ್ ನ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಸಮಾವೇಶ ನಡೆಸುವ ಕುರಿತು ಸವಿವರವಾಗಿ ತಿಳಿಸಿದರು. ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪಕ್ಷ ಸಂಘಟನೆಯ ಕುರಿತು ತಿಳಿಸಿದರು. ಬಾರ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಶರತ್, ಡಿ.ಸಿ.ಸಿ. ಸದಸ್ಯೆ ಜೆಸಿಂತಾ ಮೋನಿಸ್, ಬ್ಲಾಕ್ ಕಾಂಗ್ರೆಸ್ ನಗರ ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ ಅಂಡಿಂಜೆ, ಮುಂಡಾಜೆ ಯಂಗ್ ಚಾಲೆಂಜರ್ಸ್ ನ ಸ್ಥಾಪಕ ಅಧ್ಯಕ್ಷ ನಾಮ್ ದೇವ ರಾವ್, ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಮುಂಡಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿ, ಮಾಜಿ ಉಪಾಧ್ಯಕ್ಷೆ ವಸಂತಿ, ನೆರಿಯ ಗ್ರಾಮ ಪಂಚಾಯತ್ ಸದಸ್ಯೆ ರೀನಾ, ಮಹಿಳಾ ಘಟಕದ ಉಪಾಧ್ಯಕ್ಷೆ ಶೋಭಾ ನಾರಾಯಣ ಗೌಡ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಸುಮಂಗಲ ಹಾಗೂ ಗ್ರಾಮೀಣ ಬ್ಲಾಕ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here