


ಕೊಕ್ಕಡ: ಕೆಂಪಕೋಡಿ ಕಲ್ಕುಡ-ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ಫೆ.10 ರಂದು ನಡೆಯಿತು.
ಬೆಳಿಗ್ಗೆ ಗಣಹೋಮ, ನಾಗತಂಬಿಲ, ದೈವಗಳಿಗೆ ಶುದ್ಧ ಕಲಶ, ಸಂಜೆ ತೋರಣ ಮೂಹೂರ್ತ, ತೈಲ ಮೂಹೂರ್ತ , ಬಳಿಕ ಅನ್ನಸಂತರ್ಪಣೆ ಹಾಗೂ ರಾತ್ರಿ ದೈವಗಳ ನೇಮೋತ್ಸವವು ವಿಜೃಂಭಣೆಯಿಂದ ಜರುಗಿತು.


ಕಾರ್ಯಕ್ರಮಕ್ಕೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭೇಟಿ ನೀಡಿದರು. ಇವರಿಗೆ ಗೌರವಾಧ್ಯಕ್ಷ ಉಗ್ಗಪ್ಪ ಪೂಜಾರಿ ಕೆಂಪಕೋಡಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಉಗ್ಗಪ್ಪ ಪೂಜಾರಿ ಕೆಂಪಕೋಡಿ, ನೇಮೋತ್ಸವ ಸಮಿತಿಯ ಅಧ್ಯಕ್ಷ ಮುತ್ತಪ್ಪ ಗೌಡ ಕೇಚೋಡಿ, ನೇಮೋತ್ಸವ ಸಮಿತಿ ಕಾರ್ಯದರ್ಶಿ ಶೋಭಾ ನಾರಾಯಣ ಗೌಡ ಆಲಂಬಿಲ, ಕಲ್ಲುಡ ಕಲ್ಲುರ್ಟಿ ಸೇವಾಟ್ರಸ್ಟ್ ಅಧ್ಯಕ್ಷ ಗಿರಿಯಪ್ಪ ಗೌಡ, ಕಾರ್ಯದರ್ಶಿ ಚಂದ್ರಶೇಖರ ಬಿ., ಹಾಗೂ ಸರ್ವಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
