ಕೊಕ್ಕಡ: ಸೌತಡ್ಕ ನಿವಾಸಿ ಸಿರಾಜುದ್ದೀನ್ ನಿಧನ

0

ಕೊಕ್ಕಡ : ಇಲ್ಲಿಯ ಅಡೈ ಕಡೆ ತಿರುಗುವಲ್ಲಿ ಫೆ.1ರಂದು ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕೊಕ್ಕಡ ಸೌತಡ್ಕ ಬಳಿಯ ಸಿರಾಜುದ್ದೀನ್ (34ವ.) ರವರು ಚಿಕಿತ್ಸೆಗೆ ಸ್ಪಂದಿಸದೆ ಫೆ.7ರಂದು ನಿಧನರಾದರು.

ಇವರು ಹಲವು ವರ್ಷಗಳಿಂದ ಕೊಕ್ಕಡ -ಪಟ್ರಮೆ ಭಾಗಗಳಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ಮೃತರು ತಂದೆ, ತಾಯಿ, ಪತ್ನಿ, ಸಣ್ಣ ಮಗು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here