



ಅಳದಂಗಡಿ: ಶ್ರೀ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವದ 3 ನೇ ದಿನದ ಧಾರ್ಮಿಕ ಸಭೆಯಲ್ಲಿ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ವಹಿಸಿದ್ದರು.



ವೇದಿಕೆಯಲ್ಲಿ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ,ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್,ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಸೂತ್ರ ರೋಗ ತಜ್ಞ ಡಾ. ಸದಾನಂದ ಪೂಜಾರಿ,ಉಜಿರೆ ದಂತ ಚಿಕಿತ್ಸಾಲಯದ ಡಾ. ಎಂ.ಎಂ ದಯಾಕರ್,ಉದ್ಯಮಿ ವಿನೋದ್ ದೇವಾಡಿಗ ಅಳದಂಗಡಿ, ಉದ್ಯಮಿ ದೇವದಾಸ್ ಶೆಟ್ಟಿ ಬದ್ಯಾರು, ಅಳದಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಆಚಾರ್ಯ, ಮುಂಬಯಿ ಉದ್ಯಮಿ ಚಂದ್ರಹಾಸ ದೇವಾಡಿಗ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಚಂದ್ರಹಾಸ ದೇವಾಡಿಗ, ದೇವದಾಸ್ ಶೆಟ್ಟಿ, ವಿನೋದ್ ದೇವಾಡಿಗ, ದಿಲೀಪ್ ಚಕ್ರವರ್ತಿ, ಬೇಬಿ ಪೂಜಾರಿ ಪುಣ್ಕೆತ್ಯಾರು, ಜಯಾನಂದ ಕೊರಲ್ಲ ಇವರನ್ನು ಸನ್ಮಾನಿಸಲಾಯಿತು.

ಆರ್ಥಿಕ ಸಮಿತಿ ಸಂಚಾಲಕ ಸೋಮನಾಥ ಬಂಗೇರ ವರ್ಪಾಳೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ,ಕಾರ್ಯದರ್ಶಿ ವಿಜಯ್ ಕುಮಾರ್ ಜೈನ್ ನಿರೂಪಿಸಿದರು.








