ಕಾಜೂರಿನಲ್ಲಿ ಎಸ್ ಎ ಆಯಿಲ್ ಮಿಲ್ ಶುಭಾರಂಭ

0

ಮಿತ್ತಬಾಗಿಲು : ಇಲ್ಲಿಯ ಗ್ರಾಮ ಪಂಚಾಯತ್ ನ ಕಟ್ಟಡದಲ್ಲಿ ಉಜಿರೆಯಲ್ಲಿ ಕಳೆದ 22ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಎಸ್ ಎ. ಮಿಲ್ ನ ಶಾಖೆ ಫೆ.6ರಂದು ಶುಭಾರಂಭಗೊಂಡಿತು.

ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವ. ಫಾ. ವಿಜಯ್ ಲೋಬೊ ಆಶಿರ್ವಚನ ಮಾಡಿದರು. ಈ ಸಂದರ್ಭದಲ್ಲಿ ಉಜಿರೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ಆಂಟನಿ ಫೆರ್ನಾಂಡಿಸ್, ಮಾಜಿ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಮಾಲಕರ ಪೋಷಕರಾದ ಹೆರಾಲ್ಡ್ ಡಿಸೋಜ, ಮಗ್ದೆಲಿನ್ ಡಿಸೋಜ, ಜೋಸ್ಸಿ ಮೊರಾಸ್, ಗುತ್ತಿಗೆದಾರ ಅನಿಲ್ ಡಿಸೋಜ, ಸುನಿಲ್ ಡಿಸೋಜ, ಶ್ರೀಮತಿ ಮರಿನ ಬ್ಯಾಪ್ಟಿಸ್ಟ್ ಮೊದಲಾದವರು ಉಪಸ್ಥಿತರಿದ್ದರು.

ಮಾಲಕ ಅರುಣ್ ಡಿಸೋಜ ಸರ್ವರ ಸಹಕಾರ ಕೋರಿದರು. ಹೆರಾಲ್ಡ್ ಪಿಂಟೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here