ಅಳದಂಗಡಿ: ಮಹಾಗಣಪತಿ ದೇಗುಲದ ಅಷ್ಠಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

0

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ. 4ರಿಂದ ಮೊದಲ್ಗೊಂಡು ಫೆ. 9ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ಜರಗಿದ ಧಾರ್ಮಿಕ ಸಭೆಯ ಉದ್ಘಾಟನೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನೇರವೇರಿಸಿ ಶುಭಕೋರಿದರು.

ಮೂಡಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಧಾರ್ಮಿಕ ಸಭೆಯ ಅಧ್ಯಕ್ಷತೆ ಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಉಗ್ರಾಣದ ಉದ್ಘಾಟನೆ ನೆರವೇರಿಸಿದರು. ಬೀಡು ಮನೆ ಪಿಲ್ಯ ತಿರುಮಲೇಶ್ವರ ಪ್ರಸಾದ್ ಹಸಿರುವಾಣಿ ಹೊರೆಕಾಣಿಕೆ ಉದ್ಘಾಟಿಸಿದರು.

ದೇಗುಲದ ಅನುವಂಶೀಯ ವಂಶಸ್ಥರಾದ ಹೇಮಂತ್ ರಾವ್ ಯರ್ಡೂರು ಭಜನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋ. ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಎಚ್. ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಉದ್ಯಮಿಗಳಾದ ಸುರೇಶ್ ಪೂಜಾರಿ ಅಳದಂಗಡಿ , ಜೈದೀಪ್ ದೇವಾಡಿಗ, ಭಂಡಾರ್ಕರ್ ಕನ್ಟ್ರಕ್ಷನ್‌ನ ಗೋಕುಲ್‌ದಾಸ್ ಭಂಡಾರ್ಕರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ದೇಗುಲದ ಪ್ರಧಾನ ಅರ್ಚಕರಾದ ಎ. ಸೋಮನಾಥ ಮಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಶಶಿಧರ ಡೋಂಗ್ರೆ, ಪ್ರ. ಕಾರ್ಯದರ್ಶಿ ಪಿ. ಹೆಚ್. ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ವಂದಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದಿಂದ ಸಹಾಯಧನ ಒದಗಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಖ್ಯಾತ ವಾಸ್ತುತಜ್ಞ ಮಹೇಶ್ ಮುನಿಯಂಗಳ, ಮರದ ಶಿಲ್ಪಿ ವಸಂತ ಆಚಾರ್ಯ, ಮಹಾದಾನಿಗಳಾದ ವೀರಮ್ಮ ಸಂಜೀವ ಸಾಲ್ಯಾನ್, ಸೋಮನಾಥ ಮಯ್ಯ, ಅವನಿ ಮಂಜ ದೇವಾಡಿಗ, ರಾಣಿ ಶ್ರೀನಿವಾಸ ರೆಡ್ಡಿ ಹಾಗೂ ಗಾಯತ್ರಿ ವಿಶ್ವಕರ್ಮ ಸಂಘಟನ ಸಂಘ ಅಳದಂಗಡಿ ಅವರನ್ನು ಸಮ್ಮಾನಿಸಲಾಯಿತು.

ನಂತರ ಮಂಗಳೂರು ಸನಾತನ ನಾಟ್ಯಾಲಯದ ನಿರ್ದೇಶನದಲ್ಲಿ ರಾಷ್ಟ ಮತ್ತು ಧರ್ಮ ಜಾಗೃತಿಯ ಪುಣ್ಯಭೂಮಿ ಭಾರತ ಎಂಬ ನೃತ್ಯ ವೈವಿದ್ಯ ಜರಗಿತು.

LEAVE A REPLY

Please enter your comment!
Please enter your name here