ನಾಳ: ಓಮ್ನಿ ಕಾರು ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ

0

ನಾಳ : ಇಲ್ಲಿಯ ಗುರುವಾಯನಕೆರೆ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕಿರಸಂಕ ತಿರುವು ರಸ್ತೆಯಲ್ಲಿ ಓಮ್ನಿ ಕಾರು ಮತ್ತು ಇಚರ್ ಟ್ರಕ್ ವಾಹನಗಳ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ಫೆ.5 ರಂದು ನಡೆಯಿತು.


ಇಚರ್ ಟ್ರಕ್ ಸಾಗರದಿಂದ ಪುತ್ತೂರಿನ ಉದ್ಯಮಿಗೆ ಸೇರಿದ ಒಣ ಅಡಿಕೆಯನ್ನು ಸಾಗಿಸುವ ವೇಳೆಗೆ ಉಪ್ಪಿನಂಗಡಿ ಕಡೆಯಿಂದ ಬೆಳ್ತಂಗಡಿ ತಾಲೂಕಿನ ಕಾಜೂರು ಕ್ಷೇತ್ರಕ್ಕೆ ದೇವರ ದರ್ಶನ ಪಡೆಯಲು ಹೋಗುವ ಯಾತ್ರಾರ್ಥಿಗಳ ವಾಹನಕ್ಕೆ ಡಿಕ್ಕಿ ಹೊಡೆದಿದೆ.. ಮಾರುತಿ ಓಮಿನಿ ಡಿಕ್ಕಿ ಹೊಡೆದ ರಭಸಕ್ಕೆ ಓಮ್ನಿ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.ಅದೃಷ್ಟ ವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ, ಪುಟ್ಟ ಗಾಯಗಳಾಗಿದೆ. ಸ್ಥಳೀಯರ ಸಹಕಾರದಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here