ಭರವಸೆಗಳ ನಾಳೆಗೆ ಆಶಾದಾಯಕ ಬಜೆಟ್: ಹರೀಶ್ ಪೂಂಜ

0

ಬೆಳ್ತಂಗಡಿ: ಇಡೀ ವಿಶ್ವವೇ ಆರ್ಥಿಕ ಕುಸಿತ ಕಾಣುತ್ತಿರುವ ಭೀತಿಯಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023-2024ನೇ ಸಾಲಿನ ಮುಂಗಡ ಪತ್ರ ಭಾರತ ಸಶಕ್ತವಾಗಿದೆ, ಸದೃಡವಾಗಿದೆ, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮತ್ತಷ್ಟು ಬಲಶಾಲಿಯಾಗಿದೆ ಎಂಬುದನ್ನು ಸೂಚಿಸುತ್ತದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮುಂಗಡ ಪತ್ರದಿಂದ ಶ್ರೀಸಾಮಾನ್ಯ ಅತ್ಯುತ್ತಮ ದರ್ಜೆಯ ಗೌರವಯುತ ಜೀವನ ನಡೆಸಬಹುದೆಂಬ ಆಶಾದಾಯಕ ನಿರೀಕ್ಷೆ ಮೂಡಿದೆ, 7 ಆದ್ಯತೆಗಳ ವಿಶೇಷ ಮುಂಗಡ ಪತ್ರದಲ್ಲಿ ಎಲ್ಲರನೊಳಗೊಂಡ ಸಮಗ್ರ ಬೆಳವಣಿಗೆ, ಹಿಂದುಳಿದವರಿಗೆ, ವಂಚಿತರಿಗೆ, ರೈತರು, ಮಹಿಳೆಯರು ಪರಿಶಿಷ್ಟ ಜಾತಿ ಪಂಗಡದವರಿಗೆ ವಿಶೇಷ ಪ್ರೋತ್ಸಾಹ, ಕುಶಲಕರ್ಮಿಗಳಿಗೆ ವಿಶೇಷ ಪ್ಯಾಕೇಜ್, ಕೃಷಿಗೆ ಡಿಜಿಟಲ್ ಮೂಲ ಸೌಕರ್ಯ ಉತ್ಪಾದನೆ ಸ್ವಾಗತಾರ್ಹವಾಗಿದೆ. ಸಿರಿದಾನ್ಯಗಳ ಜಾಗತಿಕ ಕೇಂದ್ರವಾಗಿಸಲು ಪ್ರೋತ್ಸಾಹ. ಆಹಾರ ಭದ್ರತೆಯನ್ನು ನೀಡುವುದಲ್ಲದೇ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆಗೆ ಆದ್ಯತೆ ನೀಡಿದ್ದು ಗ್ರಾಮೀಣ ಪ್ರದೇಶದ ಜನತೆಗೆ ವರದಾನವಾಗಲಿದೆ. ಓದಿನ ಕೊರತೆಯನ್ನು ಸರಿದೂಗಿಸಲು ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮಕ್ಕಳ ನ್ಯಾಷನಲ್ ಡಿಜಿಟಲ್ ಲೈಬ್ರೆರಿ ಜ್ಞಾನದ ಉತ್ಪಾದನೆಯಲ್ಲಿ ಸಂಶೋಧನೆಗೆ ಒತ್ತು ಮೂಲ ಸೌಕರ್ಯ ಬಂಡವಾಳ ವೆಚ್ಚಕ್ಕೆ ದಾಖಲೆ ಪ್ರಮಾಣದಲ್ಲಿ ಅನುದಾನ ಮೀಸಲು ಸಣ್ಣ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ ಹಸಿರು ಇಂಧನಕ್ಕೆ 35 ಸಾವಿರ ಕೋಟಿಯ ಪಿ.ಎಂ ಪ್ರಣಾಮ್ ಯೋಜನೆ ಜೈವಿಕ ಗೊಬ್ಬರ ತಯಾರಿಕೆಯ ಗೋವರ್ಧನ ಮಾದರಿ 1 ಕೋಟಿ ರೈತರಿಗೆ ಸಾವಯವ ಕೃಷಿಗೆ ಪ್ರೋತ್ಸಾಹ ನಿಶ್ಚಿತವಾಗಿಯೂ ಮೂಲಸೌಕರ್ಯ, ಉದ್ಯೋಗ ಕೃಷಿ ಕ್ಷೇತ್ರಕ್ಕೆ ನೆರವಾಗಲಿದೆ.
ಆಮದು ಸುಂಕ ಇಳಿಕೆ ಹಾಗೂ ಆದಾಯ ತೆರಿಗೆ ಮಿತಿ 8 ಲಕ್ಷಕ್ಕೆ ಏರಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಶಾಸಕ ಹರೀಶ್ ಪೂಂಜ ಅತ್ಯುತ್ತಮ ಸರ್ವಾಂಗೀಣ ಪ್ರಗತಿಯ ಮುಂಗಡ ಪತ್ರ ನೀಡಿದಕ್ಕಾಗಿ ಪತ್ರಿಕಾ ಪ್ರಕಟಣೆ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

p>

LEAVE A REPLY

Please enter your comment!
Please enter your name here