ಉಜಿರೆ : ಉಜಿರೆ ಹಳೆಪೇಟೆ ಕ್ಲಸ್ಟರ್ ಮಟ್ಟದ 2022-23 ನೇ ಸಾಲಿನ ಕಲಿಕಾ ಹಬ್ಬ ಜ.24 ಮತ್ತು 25 ರಂದು ಬದನಾಜೆ ಸರಕಾರಿ ಪ್ರೌಢ ಶಾಲೆಯಲ್ಲಿ ಜರಗಿತು.
ಉಜಿರೆ ಗ್ರಾ.ಪಂ. ಸದಸ್ಯ ಹಾಗೂ ಸರಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನಿಲ್ ಡಿ ಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಜಮುನ ಕೆ. ಎಸ್. ವಹಿಸಿದ್ದರು. ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾ.ಪಂ.ಸದಸ್ಯರಾದ ಸವಿತಾ, ಲಲಿತ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ಶ್ರೀಮತಿ ತಾರಕೇಸರಿ, ಸಮೂಹ ಸಂಪನ್ಮೂಲ, ವ್ಯಕ್ತಿ ಶ್ರೀಮತಿ ಪ್ರತಿಮಾ, ಉಜಿರೆ ಗ್ರಾ. ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ವಿನುತಾ ರಜತ ಗೌಡ, ಯುವಕ ಮಂಡಲದ ಸದಸ್ಯ ಕರುಣಾಕರ, ಯುವತಿ ಮಂಡಲದ ಅಧ್ಯಕ್ಷರು, ಭಜನಾ ಮಂಡಳಿಯ ಅಧ್ಯಕ್ಷರು, ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಸಹಶಿಕ್ಷಕರು, ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಹಳೆಪೇಟೆ ಕ್ಲಸ್ಟರ್ ಕೇಂದ್ರದ 14 ಶಾಲೆಗಳ ಸುಮಾರು 120 ವಿದ್ಯಾರ್ಥಿಗಳು, ಶಾಲಾ ಶಿಕ್ಷಕರೊಂದಿಗೆ ಆಗಮಿಸಿ “ಪ್ರಶ್ನೆಯು ಪ್ರಜ್ಞೆಯಾಗಲಿ ” ಎಂಬ ಧ್ಯೇಯ ವಾಕ್ಯದೊಂದಿಗೆ ಕಲಿಕಾ ಹಬ್ಬದಲ್ಲಿ ನಾಲ್ಕು ಕಾರ್ನರ್ ನಲ್ಲಿ ಭಾಗವಹಿಸಿದ್ದರು . ಬಿ.ಆರ್.ಪಿ. ಮೋಹನ್, ಶಿಕ್ಷಣ ಸಂಯೋಜಕಿ ಚೇತನಾಕ್ಷಿ ಹಾಗೂ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಭೇಟಿ ನೀಡಿದರು. ವಿದ್ಯಾರ್ಥಿಗಳು ಚಟುವಟಿಕೆಯಲ್ಲಿ ಭಾಗವಹಿಸಿದರು. ಸ್ಥಳೀಯ ಕೃಷಿಕರ ರವಿ ನಾರಾಯಣ ರವರು ಮಾಡುತ್ತಿರುವ ಹೈನುಗಾರಿಕೆ, ರಬ್ಬರ್ ಟಿಂಗ್, ಅಡಿಕೆ ಒಣಗಿಸುವುದು, ಗೋಬರ್ ಗ್ಯಾಸ್, ವಿವಿಧ ರೀತಿಯ ಕೃಷಿಯ ಬಗ್ಗೆ ತಿಳಿದುಕೊಂಡರು. ಅದರ ಹತ್ತಿರದಲ್ಲೇ ಪ್ರಾದೇಶಿಕ ತರಕಾರಿಗೆ ಹಟ್ಟಿಗೊಬ್ಬರವನ್ನು ಬಳಸಲಾಗಿದೆ. ಶಾಲಾಭಿವೃದ್ಧಿ ಸಮಿತಿ, ಹಳ್ಳೆವಿದ್ಯಾರ್ಥಿ ಸಂಘ, ಸ್ಥಳೀಯ ಸಂಘ ಸಂಸ್ಥೆ, ಊರ ವಿದ್ಯಾಭಿಮಾನಿಗಳು, ಶಾಲಾ ಶಿಕ್ಷಕ ವೃಂದ, ಶಾಲಾ ವಿದ್ಯಾರ್ಥಿ ವೃಂದ ಇವರೆಲ್ಲರ ಸಹಕಾರದಿಂದ ಕಾರ್ಯಕ್ರಮವು ಸಂಪನ್ನಗೊಂಡಿತು.
ಬದನಾಜೆ ಸ. ಪ್ರೌಢ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
p>