ಮಡಂತ್ಯಾರು: ಎನ್ ಸಿ ಸಿ, ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ್ & ರೇಂಜರ್, ರೆಡ್ ರಿಬ್ಬನ್ ಕ್ಲಬ್, ರೋಟರಿ ಕ್ಲಬ್ ಮಡಂತ್ಯಾರು, ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಜ.27 ರಂದು ನಡೆಯಿತು.
ಕಾಲೇಜಿನ ಸಂಚಾಲಕ ವಂ. ಫಾ. ಬೇಸಿಲ್ ವಾಸ್ ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಹಾಗೂ ರೋಟರಿ ಸದಸ್ಯರಿಂದ ಒಟ್ಟು 104 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಆಗಮಿಸಿದ ವೈದ್ಯಕೀಯ ಸಿಬ್ಬಂದಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಎನ್ ಎಂ. ರವರು ಸ್ವಾಗತಿಸಿ ವಂದಿಸಿದರು.
p>