ಚಾರ್ಮಾಡಿಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ; ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅನಿಲ್

0

ಚಾರ್ಮಾಡಿ: ಜ.25ರಂದು 14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದ್ದು ಹಾವನ್ನು ಕಕ್ಕಿಂಜೆಯ ಉರಗ ತಜ್ಞ ಸ್ನೇಕ್ ಅನಿಲ್ ಅವರು ಹಾವನ್ನು ರಕ್ಷಿಸುವ ಕಾರ್ಯಮಾಡಿದ್ದಾರೆ.

ಇಲ್ಲಿನ ನಿವಾಸಿ ಬಾಬುಗೌಡ ಎಂಬವರ ಮನೆಯ ಸಮೀಪ ಹಾವು ಕಾಣಿಸಿಕೊಂಡಿದ್ದು ಕೂಡಲೇ ಮನೆಯವರು ಈ ಬಗ್ಗೆ ಅನಿಲ್ ಅವರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಅವರು ಸ್ಥಳಕ್ಕೆ ಆಗಮಿಸಿ ಅತ್ಯಂತ ಸಾಹಸಿಕವಾಗಿ ಹಾವನ್ನು ರಕ್ಷಿಸುವ ಕಾರ್ಯವನ್ನು ಮಾಡಿದ್ದಾರೆ.
ರಕ್ಷಿಸಿದ ಹಾವನ್ನು ಅವರು ಅರಣ್ಯಕ್ಕೆ ಬಿಟ್ಟಿದ್ದಾರೆ. ಈಗಾಗಲೇ ಅವರು ನೂರಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.ಇದು 115 ನೇ ಕಾಳಿಂಗ ಸರ್ಪವಾಗಿದೆ.

LEAVE A REPLY

Please enter your comment!
Please enter your name here