


ಮಿತ್ತಬಾಗಿಲು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜರೋಹಣವನ್ನು ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರು ಹೈದರಾಲಿ ಕಾಜೂರು ರವರು ನೆರವೇರಿಸಿ, ಸಂವಿಧಾನ ರಚನೆ,ಪ್ರಜಾಪ್ರಭುತ್ವ ಆಡಳಿತ ವೈಖರಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯೋಪಾಧ್ಯಾಯರು ಶ್ರೀಮತಿ ಇಂದಿರಾ ಕುಮಾರಿ ರವರು ಸ್ವಾಗತಿಸಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಮಂತ್ರಿ ಫಾತಿಮ ರಝ್ವಿನ ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಭಾಷಣ ಮಾಡಿದರು. ಸಹಶಿಕ್ಷಕರು ಭಾಗವಹಿಸಿ ಶುಭಹಾರೈಸಿದರು. ಹಿರಿಯ ಶಿಕ್ಷಕ ಅಣ್ಣಪ್ಪ ರವರು ಶುಭಾಶಯಗಳು ತಿಳಿಸಿ ಧನ್ಯವಾದ ಮಾಡಿದರು.