ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.25 ರಂದು ಮೂಡಪ್ಪ ಸೇವೆ ಜರುಗಿತು.
ಬೆಳಿಗ್ಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿ ಗಣಹೋಮ, ರಾತ್ರಿ ಮೂಡಪ್ಪ ಸೇವೆ ಜರುಗಿತು.
ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕೊಕ್ಕಡ ಗ್ರಾ.ಪಂ ಅಧ್ಯಕ್ಷ ಯೋಗೀಶ ಆಲಂಬಿಲ ವಹಿಸಿದ್ದರು. ದಿಕ್ಸೂಚಿ ಔಆಷಣವನ್ನು ಭಾಷಣವನ್ನು ಶಿವಮೊಗ್ಗ ನಟೇಶ್ ಮಾಡಿದರು. ವೇದಿಕೆಯಲ್ಲಿ ಆರ್ ಎಸ್ ಎಸ್ ಮುಖಂಡ ಕೃಷ್ಣಭಟ್, ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಾಮೊದರ ಶೆಟ್ಟಿ, ಡಾ. ಮೋಹನ್ ದಾಸ್ ಗೌಡ ಕೊಕ್ಕಡ, ವಿಶ್ವನಾಥಗೌಡ ನಿಡ್ಲೆ ಇವರನ್ನು ಸನ್ಮಾನಿಸಲಾಯಿತು.
ಮೂಡಪ್ಪ ಸೇವಾ ಜಾತ್ರಾ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿದರು. ವಿಶ್ವನಾಥ ಮತ್ತು ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ವಾಮನ ನಾಯಕ್ ಉಪ್ಪಿನಂಗಡಿ ಅವರ ನೇತೃತ್ವದಲ್ಲಿ ಸ್ಥಳೀಯ ಪ್ರಸಿದ್ಧ ಭಜನಾ ತಂಡದವರಿಂದ ಭಜನಾ ಸೇವೆ, ಸಂಜೆ ಯಜ್ನೇಶ್ ಆಚಾರ್ಯ ಸುಬ್ರಹ್ಮಣ್ಯ ಇವರಿಂದ ಭಕ್ತಿ ರಸಮಂಜರಿ, ಶ್ರೀ ಕ್ಷೇತ್ರ ಸೌತಡ್ಕ ಶಿಶುಮಂದಿರ ವಿದ್ಯಾರ್ಥಿಗಳಿಂದ ಚಿಣ್ಣರ ಚಿಲಿಪಿಲಿ, ರಾತ್ರಿ ಪುಣ್ಯ ಭೂಮಿ ಭಾರತ- ರಾಷ್ಟ್ರ ದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾಎದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ನೃತ್ಯ ನಿರ್ಧೇಶನದ, ಪ್ರಖರ ವಾಗ್ಮಿ ಆದರ್ಶ ಗೋಖಲೆ ಕಾರ್ಕಳ ನಿರೂಪಣೆಯ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ನೃತ್ಯ ವೈವಿಧ್ಯ ಜರುಗಿತು.