ಉಜಿರೆ: ಉಜಿರೆ ಗ್ರಾಮದ ಕಲ್ಲೆ ಅಜಿತ ನಗರದಲ್ಲಿ ಶ್ರೀ ನಾಗಬ್ರಹ್ಮ, ಶ್ರೀ ವನದುರ್ಗಾ ಹಾಗೂ ಶ್ರೀ ರಕ್ತೇಶ್ವರಿ, ಮಹಿಸಂದಾಯ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ಸಾನಿಧ್ಯದಲ್ಲಿ ಶ್ರೀ ವನದುರ್ಗಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ರಕ್ತೇಶ್ವರಿ ಸಹ ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶೋತ್ಸವ ಮತ್ತು ನರ್ತನ ಸೇವೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವೀ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಡಿ. ಹರ್ಷೇಂದ್ರ ಕುಮಾರ್ ರವರ ಸಹಕಾರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ರವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ವೇ| ಮೂ| ರಾಜಗೋಪಾಲ ಯಡಪಡಿತ್ತಾಯ, ಊರ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಜ.24 ರಿಂದ ಪ್ರಾರಂಭಗೊಂಡು ಜ.27 ರವರೆಗೆ ನಡೆಯಲಿದೆ.
ಜ.24 ಋತ್ವಿಜರ ಆಗಮನ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್ವರಣೆ, ಆದ್ಯ ಗಣಪತಿ ಹೋಮ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಪ್ತಶುದ್ಧಿ, ವಾಸ್ತು ಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ದಿಕ್ಪಾಲ ಬಲಿ ನಡೆಯಿತು.
ಈ ಸಂದರ್ಭದಲ್ಲಿ ದೈವಜ್ಞರಾದ ಸುರತ್ಕಲ್ ನಾಗೇಂದ್ರ ಭರದ್ವಾಜರು, ಪ್ರಧಾನ ಅರ್ಚಕ ವೇದಮೂರ್ತಿ ರಾಜಗೋಪಾಲ ಯಾಡಪಡಿತ್ತಾಯ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಅನಂತ್ ಮೋಹನ್ ರಾವ್ ಮೊಡೋಟ್ಟು, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್ ಶೆಟ್ಟಿ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್, ಶ್ರೀಮತಿ ಲೀಲಾವತಿ ರಾಜು ಮೇಸ್ತ್ರಿ, ಮೋಹನ್ ಕುಮಾರ್, ಶ್ರಿಮತಿ ರೇಷ್ಮಾ, ಮೌಲ್ಯ, ಮಾನ್ವಿ, ಪ್ರಕಾಶ್, ಶ್ರಿಮತಿ ಜಯಂತಿ, ಮಹೇಶ್ ರಾಜೇಶ್ ಪೈ, ಲಕ್ಷ್ಮಣ್ ಸಪಲ್ಯ, ರವಿ ಚಕ್ಕಿತಾಯ, ಉದಯಚಂದ್ರ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ವೆಂಕಟೇಶ್ ಶೆಟ್ಟಿ, ನಾಗರಾಜ್, ಭರತ್, ರಾಘು, ತಿಮ್ಮಯ ಮೊದಲಾದವರು ಉಪಸ್ಥಿತರಿದ್ದರು.