ಉಜಿರೆಯ ಎಸ್ ಡಿ.ಎಂ .ಶಾಲಾ ವಿದ್ಯಾರ್ಥಿ ಮಧುಶ್ರೀಗೆ ವರ್ಷದ ಯುವ ವಿಜ್ಞಾನಿ ಪ್ರಶಸ್ತಿ

0

  • ಉಜಿರೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಆಶ್ರಯದಲ್ಲಿ ಕಲಬುರ್ಗಿಯ ಖಣದಾಳದಲ್ಲಿ ನಡೆದ 30ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉಜಿರೆಯ ಶ್ರೀಧ.ಮಂ. ಆಂಗ್ಲ ಮಾಧ್ಯಮ ಶಾಲೆಯ (ರಾಜ್ಯ ಪಠ್ಯಕ್ರಮ) 8ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ ಮಂಡಿಸಿದ “ಅಡಕೆ ಸಿಪ್ಪೆಯಿಂದ ಪೇಪರ್ ತಯಾರಿ” ಎಂಬ ಕಾರ್ಯಯೋಜನೆಗೆ ಗ್ರಾಮೀಣ ವಿಭಾಗದ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ದೊರೆತಿದ್ದು ಅವರು ವರ್ಷದ ಯುವ ವಿಜ್ಞಾನಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 210ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ಆರು ವಿದ್ಯಾರ್ಥಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು ಉಜಿರೆಯ ಮಧುಶ್ರೀ ಪ್ರಥಮ ಸ್ಥಾನ ಪಡೆದರು. ರಾಷ್ಟ್ರಮಟ್ಟದ ಸಮಾವೇಶ ಜ. 28ರಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯಲಿದೆ.
  • ಕಾರ್ಯಯೋಜನೆಯಲ್ಲಿ ಇದೇ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ  ದೀಪಿಕಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ನಾಯಕ್ ಹಾಗೂ ವಿಜ್ಞಾನ ಶಿಕ್ಷಕಿ ಶೋಭಾ ಅವರು ಕಾರ್ಯಯೋಜನೆಗೆ ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here