


ಲಾಯಿಲ : ಇಲ್ಲಿಯ ಕೊಯ್ಯೂರು ಕ್ರಾಸ್ ಬಳಿ ನೂತನವಾಗಿ ಪ್ರಾರಂಭಗೊಂಡ ಸುಜಯ ಬ್ರಿಕ್ಸ್ ಮತ್ತು ಹಾರ್ಡ್ವೇರ್ ಸಂಸ್ಥೆಯನ್ನು ಮಾಜಿ ಶಾಸಕ ವಸಂತ ಬಂಗೇರ ರವರು ಜ.20 ರಂದು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಲಾಯಿಲ ಗ್ರಾ.ಪಂ. ಅಧ್ಯಕ್ಷ ಆಶಾ ಬೆನೆಡಿಕ್ಟ ಸಲ್ಡಾನ, ಬೆಳ್ತಂಗಡಿ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಅಜಯ, ಮಂಗಳೂರು ಕಂಟ್ರಾಕ್ಟರ್ ಸುನೀಲ್ ದಂಡಕೇರಿ, ಕಾರ್ಮಿಕ ಮುಖಂಡ ಬಿ.ಎಮ್ ಭಟ್, ಸ್ಥಳದ ಮಾಲಕ ಮಂಜುನಾಥ್ ಎಲ್,ನಿವೃತ್ತ ಎಸ್ ಪಿ. ಪಿತ್ತಾಂಬರ ಹೇರಾಜೆ ಉಪಸ್ಥಿತರಿದ್ದು ಶುಭಕೋರಿದರು. ಶೇಖರ್ ಬಂಗೇರ ಹೇರಾಜೆ ಸ್ವಾಗತಿಸಿ, ಜಯರಾಮ್ ಬಂಗೇರ ಹೇರಾಜೆ ವಂದಿಸಿದರು. ಆರೋಗ್ಯ ಇಲಾಖೆಯ ನಿವೃತ್ತ ನೌಕರ ವಸಂತ ಸುವರ್ಣ ನಿರೂಪಿಸಿದರು. ಸಂಸ್ಥೆಯ ಮಾಲಕ ಶ್ರವಣ್ ರಾಜ್ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಲಾಯಿಲ ಗ್ರಾ.ಪಂ. ಸದಸ್ಯರುಗಳಾದ ಮಹೇಶ, ಹರೀಕೃಷ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಹೇರಾಜೆ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದು ಭಾಗವಹಿಸಿದ್ದರು.
